ಅತ್ತೆ-ಸೊಸೆ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ದ್ವೇಷ, ಕಿಡಿ, ಜಗಳ ಇತ್ಯಾದಿ. ಇತ್ತೀಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವವರಿಗಂತೂ ಅತ್ತೆ-ಸೊಸೆ ಚೆನ್ನಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಇದೆ.
ಆದರೆ ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಇಂಥದ್ದೊಂದು ಮನಸ್ಥಿತಿಯಿಂದ ಹೊರಕ್ಕೆ ಬರುವಿರಿ. ಸೊಸೆ ಬೊಂಬಾಟ್ ನೃತ್ಯ ಮಾಡುತ್ತಿದ್ದು, ಅತ್ತೆ ಅದಕ್ಕೆ ಪ್ರೋತ್ಸಾಹ ನೀಡುವ ಈ ವಿಡಿಯೋ ವೈರಲ್ ಆಗಿದ್ದು, ಜನಮನ ಗೆದ್ದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಸೊಸೆ ವಿನಿತಾ ಶರ್ಮಾ ಅಡುಗೆ ಮನೆಯ ಎದುರು ನರ್ತಿಸುತ್ತಿದ್ದಾಳೆ. ಅತ್ತೆ ಅಡುಗೆ ಮನೆ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ರೇಸ್ 2 ಚಿತ್ರದ “ಲತ್ ಲಗ್ ಗಯೀ” ಗೆ ಸೊಸೆ ನರ್ತಿಸುತ್ತಾ ನಂತರ ಅತ್ತೆಯ ಬಳಿ ಬಂದು ಆಕೆಯ ಜತೆಯೂ ನರ್ತಿಸುವುದನ್ನು ನೋಡಬಹುದು.
ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಎಲ್ಲಾ ಅತ್ತೆ- ಸೊಸೆಯರೂ ಹೀಗೆಯೇ ಇದ್ದರೆ ಬದುಕು ಎಷ್ಟು ಸುಂದರ ಎಂದಿದ್ದಾರೆ.