
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿಗೆ ಮಗ ಉಡುಗೊರೆ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾನೆ. ಈ ವಿಡಿಯೋವನ್ನು ನಟ ಆರ್. ಮಾಧವನ್ ಅವರು ರೀ ಟ್ವೀಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗ ತನ್ನ ತಾಯಿಗೆ ಹೊಸ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ವೇಳೆ ಆಕೆ ನೀಡಿದ ಪ್ರತಿಕ್ರಿಯೆ ಮಿಲಿಯನ್ ಡಾಲರ್ ಗಿಂತಲೂ ಅಮೂಲ್ಯವಾಗಿದೆ.
ಜನವರಿ 5 ರಂದು ಟ್ವಿಟ್ಟರ್ ಬಳಕೆದಾರ ವಿಘ್ನೇಶ್ ಸಮ್ಮು ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ತಾಯಿಯ ಪಕ್ಕದಲ್ಲಿಟ್ಟಿದ್ದ ಬ್ಯಾಗ್ನಲ್ಲಿ 8800 ರೂ. ಮೌಲ್ಯದ ಮೊಬೈಲ್ ಅನ್ನು ಇಡಲಾಗಿದ್ದು, ಕವರ್ ಅನ್ನು ತೆರೆದಾಗ ಆತನ ತಾಯಿ ಪಟ್ಟ ಸಂತೋಷಕ್ಕೆ ಪಾರವೇ ಇರಲಿಲ್ಲ. ತಾಯಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಪುತ್ರ ಮೊಬೈಲ್ ಫೋನ್ ಅನ್ನು ನೀಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ಶೀಘ್ರದಲ್ಲೇ ನಟ ಆರ್.ಮಾಧವನ್ ಅವರ ಗಮನ ಸೆಳೆದಿದೆ. ಕೂಡಲೇ ಅವರು ವಿಡಿಯೋವನ್ನು ಮರು ಹಂಚಿಕೊಂಡಿದ್ದು, ಈ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.