ವಾರಾಂತ್ಯಕ್ಕೆ ಅಥವಾ ಬೇರೆ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವುದನ್ನು ಹಲವರು ಇಷ್ಟಪಡುತ್ತಾರೆ. ಹಾಗಂತ ಹೆಚ್ಚಿನವರು ದುಂದುವೆಚ್ಚ ಮಾಡಲು ಇಷ್ಟಪಡುವುದಿಲ್ಲ. ಕೆಲವರು ಊಟಕ್ಕಾಗಿ ಪಾವತಿಸುವ ಹಣಕ್ಕೆ ಖಾದ್ಯವು ರುಚಿಯಾಗಿರಬೇಕು ಅಥವಾ ಗಾತ್ರದಲ್ಲಿ ರಾಜಿ ಮಾಡಿಕೊಳ್ಳದಂತಹ ಉತ್ತಮ ಊಟ ಪಡೆಯಬೇಕು ಅಂತಾ ಭಾವಿಸುತ್ತಾರೆ.
ಆದರೆ ಇಲ್ಲೊಬ್ಬಳು ಸ್ವಲ್ಪವೇ ಸ್ವಲ್ಪ ಖಾದ್ಯಕ್ಕಾಗಿ ಪಾವತಿಸಿದ ಮೊತ್ತ ಕೇಳಿದರೆ ನೀವು ಶಾಕ್ ಗೆ ಒಳಗಾಗುವುದು ಗ್ಯಾರಂಟಿ..!
ಹೌದು, ಲಂಡನ್ ನ ಪ್ರಸಿದ್ಧ ರೆಸ್ಟೋರೆಂಟ್ ವೊಂದಕ್ಕೆ ತೆರಳಿದ ಯುವತಿಯೊಬ್ಬಳು ತನಗಾಗಿ ಅಲ್ಪ ಆಹಾರವನ್ನು ಆರ್ಡರ್ ಮಾಡಿದ್ದಾಳೆ. ಆದರೆ ಅದಕ್ಕಾಗಿ ಆಕೆ 30 ಪೌಂಡ್ ಅಂದರೆ 3,000 ರೂ.ಗಳನ್ನು ಪಾವತಿಸಿದ್ದಾಳೆ. ತನ್ನ ತಟ್ಟೆಯಲ್ಲಿರುವ ಖಾದ್ಯದ ಫೋಟೋ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ‘ಸ್ನೇಹಿತರೇ ನನ್ನ 30 ಪೌಂಡಿನ ಊಟ ನೋಡಿ, ನಾನಿದನ್ನು ಶಾರ್ಡ್ ನಲ್ಲಿ ತೆಗೆದುಕೊಂಡೆ’ ಅಂತಾ ಶೀರ್ಷಿಕೆ ನೀಡಿದ್ದಾಳೆ.
BREAKING NEWS: ರಾಜ್ಯದಲ್ಲಿಂದು ಕೊರೋನಾದಿಂದ 17 ಮಂದಿ ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ
ಸದ್ಯ ಈ ಫೋಟೋ ನೋಡಿದ ನೆಟ್ಟಿಗರು ಗೊಂದಲಕ್ಕೊಳಗಾದರು. ಕೆಲವು ಬಳಕೆದಾರರು, ರೆಸ್ಟೋರೆಂಟ್ ಆಕೆಗೆ ಹೆಚ್ಚಿನ ಶುಲ್ಕ ವಿಧಿಸಿದೆ ಎಂದು ಹೇಳಿದರೆ, ಇನ್ನು ಕೆಲವರು ಮೆನು ನೋಡಿ ನಂತರ ಬೇರೆಡೆಗೆ ಹೋಗಬಹುದು ಅಂತಾ ತಮಾಷೆ ಮಾಡಿದ್ದಾರೆ.
https://twitter.com/raveen__x/status/1430580433503326213?ref_src=twsrc%5Etfw%7Ctwcamp%5Etweetembed%7Ctwterm%5E1430580433503326213%7Ctwgr%5E%7Ctwcon%5Es1_&ref_url=https%3A%2F%2Fwww.timesn