
ಸಾಮಾಜಿಕ ಜಾಲತಾಣದಿಂದಾಗಿ ಜಗತ್ತಿನ ಮೂಲೆ ಮೂಲೆಗಳ ಚಿತ್ರ-ವಿಚಿತ್ರ ಘಟನೆಗಳನ್ನು ನಾವು ಕುಳಿತಲ್ಲಿಯೇ ನೋಡುವುದು ಸಾಧ್ಯವಾಗಿದೆ. ಈಗ ಅಂಥದ್ದೇ ಬಣ್ಣ ಬದಲಿಸುವ ಬಟ್ಟೆಯ ವಿಡಿಯೋ ಒಂದು ವೈರಲ್ ಆಗಿದೆ. ಬಿಳಿ ಬಣ್ಣದ ಬಟ್ಟೆಯಿಂದ ಹೊರಕ್ಕೆ ಬರುತ್ತಿರುವ ಯುವತಿಯೊಬ್ಬಳ ಬಟ್ಟೆ ಗುಲಾಬಿ ಬಣ್ಣಕ್ಕೆ ತಿರುಗಿರುವ ವಿಡಿಯೋ ಇದಾಗಿದೆ.
ಕೆಲವು ದಿನಗಳ ಹಿಂದೆ, ಇಜ್ಜಿ ಎಂಬ ಇಂಟರ್ನೆಟ್ ಬಳಕೆದಾರರು ಯುವತಿಯ ಈ ವಿಡಿಯೋ ಶೇರ್ ಮಾಡಿದ್ದು, ನೆಟ್ಟಿಗರನ್ನು ಅಚ್ಚರಿಗೆ ಒಳಪಡಿಸುತ್ತಿದೆ ಇದು. ಸೂರ್ಯನ ಬೆಳಕಿನಲ್ಲಿ ತಕ್ಷಣ ಬಣ್ಣವನ್ನು ಬದಲಾಯಿಸಬಹುದಾದ ಬಟ್ಟೆ ಇದಾಗಿದೆ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಿಳಿ ಬಣ್ಣದ ಡ್ರೆಸ್ ಧರಿಸಿ ಬರುತ್ತಾಳೆ. ಸೂರ್ಯನ ಬೆಳಕಿನಲ್ಲಿ ಹೊರಗೆ ಹೋಗುವ ಮೊದಲು, ನಾವು ಬಿಸಿಲಿನಲ್ಲಿ ಹೋಗೋಣ ಎಂದು ಹೇಳುವ ಯುವತಿ, ಸೂರ್ಯನ ಬೆಳಕಿಗೆ ಕಾಲಿಟ್ಟಾಗ, ಅವಳ ಬಿಳಿ ಉಡುಪಿನ ಬಣ್ಣವು ಗುಲಾಬಿ ಬಣ್ಣವಾಗಿ ಮಾರ್ಪಾಟಾಗುತ್ತದೆ. ಇದನ್ನು ಕಂಡು ಖುದ್ದು ಯುವತಿಯೇ ಅಚ್ಚರಿ ಪಡುವ ವಿಡಿಯೋ ಇದಾಗಿದೆ.
ಈ ವಿಡಿಯೋ ಅನ್ನು ಇದಾಗಲೇ 25.1 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 2.2 ದಶಲಕ್ಷಕ್ಕೂ ಹೆಚ್ಚು ಜನರು ಅದನ್ನು ಇಷ್ಟಪಟ್ಟಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂದು ಹಲವರು ಪ್ರಶ್ನಿಸಿದ್ದಾರೆ.