alex Certify ಹೆಸರು ನೆನಪಿಲ್ಲ…….. ಎಲ್ಲಿದ್ದಾಳೆ ಅಂತಾನೂ ಗೊತ್ತಿಲ್ಲ……. ಆದರೂ 18 ವರ್ಷದ ಹಳೆ ಗೆಳತಿಯನ್ನ ಹುಡುಕಿದ ನೇಹಾ: ಇದು ಗೆಳೆತನದ ರೋಚಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರು ನೆನಪಿಲ್ಲ…….. ಎಲ್ಲಿದ್ದಾಳೆ ಅಂತಾನೂ ಗೊತ್ತಿಲ್ಲ……. ಆದರೂ 18 ವರ್ಷದ ಹಳೆ ಗೆಳತಿಯನ್ನ ಹುಡುಕಿದ ನೇಹಾ: ಇದು ಗೆಳೆತನದ ರೋಚಕ ಕಥೆ

ಬಾಲ್ಯದಲ್ಲಿ ಆಡಿದ್ದ ಆಟ……. ಆಗ ಪರಿಚಯವಾದ ಸ್ನೇಹಿತರು ಯಾರು ತಾನೆ ಮರೆಯೋದಕ್ಕೆ ಸಾಧ್ಯ. ದೊಡ್ಡವರಾದ ಮೇಲೂ ಆ ಸಮಯ ನೆನಪಾದರೆ ಸಾಕು ಆ ಗೆಳೆಯರು ಮತ್ತೊಮ್ಮೆ ಭೇಟಿಯಾಗಬಾರದೇ ಎಂದು ಎಂಥವರಿಗೂ ಅನಿಸುತ್ತೆ. ಆದರೆ ದೊಡ್ಡವರಾದಂತೆ ಅವರವರು ತಮ್ಮ ತಮ್ಮ ಗುರಿಗಳನ್ನ ಅರಸಿಕೊಂಡು ಬೇರೆ ಬೇರೆ ದಿಕ್ಕಿನತ್ತ ಪಯಣ ಬೆಳೆಸಿ ಬಿಟ್ಟಿರುತ್ತಾರೆ. ಕೆಲವರಂತೂ ಮಂಗಮಾಯವಾಗಿರುತ್ತಾರೆ ಅವರನ್ನ ಹುಡುಕುವುದೇ ಅಸಾಧ್ಯ.

ಅಸಲಿಗೆ ನೇಹಾ ಅನ್ನೊ ಯುವತಿ ತನ್ನ ಲೋವರ್ ಕೆ.ಜಿ. ಸ್ನೇಹಿತೆಯನ್ನ ಹುಡುಕಲು ಆಕೆ ಹಲವು ದಿನಗಳಿಂದ ಯತ್ನಿಸಿದ್ದಾಳೆ. ಮಾಡಿದ್ದ ಪ್ರಯತ್ನ ಎಲ್ಲವೂ ವ್ಯರ್ಥವಾಗಿತ್ತು. ಕೊನೆಗೆ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ತನ್ನ ವಿಡಿಯೋ ಒಂದನ್ನ ಶೇರ್ ಮಾಡಿದ್ದಾಳೆ. ಆ ವಿಡಿಯೋದಲ್ಲಿ ತನ್ನ ಗೆಳೆತಿ ಕುರಿತು ಹೇಳಿಕೊಂಡಿದ್ದಾಳೆ.

2006ರಲ್ಲಿ ನಾನು ನನ್ನ ಸ್ನೇಹಿತೆ ಲಕ್ಷಿತಾಳೊಂದಿಗೆ ಕೆಜಿ ತರಗತಿಯಲ್ಲಿ ಓದುತ್ತಿದ್ದೆ, ಆದರೆ ಲಕ್ಷಿತಾಳ ಪೋಷಕರು ಬೇರೆ ನಗರಕ್ಕೆ ಸ್ಥಳಾಂತರಗೊಂಡಿದ್ದರಿಂದ ನಮ್ಮ ಸಂಪರ್ಕ ಮುರಿದುಬಿತ್ತು ಎಂದು ನೇಹಾ ವಿಡಿಯೋದಲ್ಲಿ ಹೇಳಿದ್ದಾರೆ. ಅವರ ಪೂರ್ಣ ಹೆಸರು ಕೂಡ ನನಗೆ ಸರಿಯಾಗಿ ನೆನಪಿರಲಿಲ್ಲ. ಈಗ ಆಕೆಯ ನೆನಪು ತಂಬಾ ಆಗುತ್ತಿದೆ. ನಾನು ಆಕೆಯ ಹುಡುಕಾಟದಲ್ಲಿ ಇದ್ದೇನೆ ಎಂದು ಹೇಳಿದ್ದಾಳೆ.

ಅಷ್ಟೆ ಅಲ್ಲ ಈ ಹುಡುಕಾಟಕ್ಕಾಗಿ ಅಂತಾನೇ ಪ್ರತ್ಯೇಕ ಇನ್‌ಸ್ಟಾಗ್ರಾಮ್ ಖಾತೆಯನ್ನು ಇವರು ಸೃಷ್ಟಿಮಾಡಿದ್ದರು. ಅದರಲ್ಲಿ ತಮ್ಮ ಹಳೆಯ ಶಾಲೆಯ ಗ್ರೂಪ್ ಫೋಟೋ ಹಾಗೂ ಬಾಲ್ಯದ ಇನ್ನೂ ಕೆಲ ಫೋಟೋಗಳನ್ನ ಶೇರ್‌ ಮಾಡಿಕೊಂಡಿದ್ದರು. ಯಾರಾದರೂ ಇದನ್ನ ನೋಡಿ ಪ್ರತ್ಯುತ್ತರ ಕೊಡುತ್ತಾರೆ ಅನ್ನೊ ನಿರೀಕ್ಷೆಯಲ್ಲೇ ಪ್ರತಿನಿತ್ಯ ಈ ಖಾತೆಯನ್ನ ಅವರು ನೋಡುತ್ತಿದ್ದರು. ಅಂತೂ ಇಂತೂ ಕೊನೆಗೂ ಒಂದು ದಿನ ಈ ಪೋಸ್ಟ್‌ಗೆ ಪ್ರತ್ಯುತ್ತರ ಬಂದಿದೆ. ಆ ದಿನ ಇವರ ಖುಷಿಗೆ ಪಾರವೇ ಇರಲಿಲ್ಲ.

ಈ ಖುಷಿಯನ್ನ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು ಅದಕ್ಕೆ ಶೀರ್ಷಿಕೆಯಲ್ಲಿ ’ ಕೊನೆಗೂ ನಾನು ನಿನ್ನ ಹುಡುಕಿದೆ. 18 ವರ್ಷ ನಂತರ ಹಳೆಯ ಗೆಳತಿಯನ್ನ ಭೇಟಿಯಾಗುತ್ತಿದ್ದೇನೆ. ನನಗೆ ನಂಬಲು ಆಗುತ್ತಿಲ್ಲ. 2006 ರಲ್ಲಿ, ನನ್ನ ಸ್ನೇಹಿತೆ LKG ತರಗತಿಯ ಲಕ್ಷಿತಾ ಅವರ ಪೋಷಕರು ಜೈಪುರಕ್ಕೆ ಸ್ಥಳಾಂತರಗೊಂಡಾಗ ಅವರೊಂದಿಗಿನ ನನ್ನ ಸಂಪರ್ಕವು ಮುರಿದುಹೋಯಿತು. ಅವಳ ಉಪನಾಮವೂ ನೆನಪಿರಲಿಲ್ಲ. ತದನಂತರ……..‘ ಅಂತ ಬರೆದುಕೊಂಡಿದ್ದಾರೆ.

ನೇಹಾ ಅವರ ಈ ಪೋಸ್ಟ್‌ಗೆ ಜನರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೇಹಾ ಅವರ ತಾಳ್ಮೆಯನ್ನು ಜನ ಕೊಂಡಾಡುತ್ತಿದ್ದಾರೆ. ಇದನ್ನು ಸ್ನೇಹದ ಗುರಿ ಎಂದು ಜನರು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು – ವಾಹ್, ಇದು ತುಂಬಾ ಒಳ್ಳೆಯದು, ನಾವು ನಮ್ಮ ಬಾಲ್ಯದ ಸ್ನೇಹಿತನನ್ನು ಸಹ ಹೀಗೆ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...