ಸೈನಸ್ಗಳನ್ನು ಕ್ಲಿಯರ್ ಮಾಡಲು ಬೆಳ್ಳುಳ್ಳಿಯನ್ನು ಮೂಗಿಗೆ ಹಾಕುವ ಪ್ರಯೋಗದ ವಿಡಿಯೋವೊಂದನ್ನು ಯುವತಿಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಮೂಗಿನ ಹೊಳ್ಳೆಗಳಿಗೆ ಬೆಳ್ಳುಳ್ಳಿ ತುಂಡುಗಳನ್ನು ಹಾಕಿಕೊಂಡ ಈಕೆ, ಈ ವಿಶಿಷ್ಟ ಹ್ಯಾಕ್ನ ಅಷ್ಟೂ ಕ್ರಿಯೆಯ ವಿಡಿಯೋ ಮಾಡಿಕೊಂಡಿದ್ದಾರೆ.
“ಇದು ಕೆಲಸ ಮಾಡುವುದಿಲ್ಲ ಎಂದುಕೊಂಡಿದ್ದೆ. ಇದನ್ನು ಜೋಕ್ ಮಾಡಲೆಂದು ವಿಡಿಯೋ ಮಾಡಿಕೊಂಡೆ. ಬೆಳ್ಳುಳ್ಳಿಯ ತಾಜಾ ಚೂರುಗಳನ್ನು ಮೂಗಿನ ಹೊಳ್ಳೆಗಳಿಗೆ ಇಟ್ಟುಕೊಂಡೆ. ಟೈಮರ್ ಸೆಟ್ ಮಾಡಿಕೊಂಡು 10 ನಿಮಿಷಗಳ ಕಾಲ ಟಿವಿ ನೋಡುತ್ತಾ ಕಾಯುತ್ತಿದ್ದೆ” ಎಂದು ರೊಜ಼ಲಿನ್ ತಿಳಿಸಿದ್ದಾರೆ.
ಕಾರು ಮಾಲೀಕರಿಗೆ ಮುಖ್ಯ ಮಾಹಿತಿ: ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಣೆ
ಬೆಳ್ಳುಳ್ಳಿ ಚೂರುಗಳನ್ನು ಹೊರ ತೆಗೆದಾಗ ಖುದ್ದು ಆಕೆಗೆ ಭಾರೀ ಅಚ್ಚರಿ ಕಾದಿತ್ತು. ಅದೇನೆಂದು ಈ ವಿಡಿಯೋ ನೋಡಿದರೆ ನಿಮಗೇ ತಿಳಿಯುತ್ತದೆ. ಆದರೆ ನೀವೂ ಈ ಪ್ರಯೋಗ ಮಾಡಲು ಹೋಗಬೇಡಿ. ಇದರಿಂದ ತೊಂದರೆಯೂ ಸಂಭವಿಸೀತು.