ಅಕ್ಟೋಬರ್ ಬಂತೆಂದರೆ ಸಾಕು ಅಮೆರಿಕದಲ್ಲಿ ’ ಹ್ಯಾಲೊವೀನ್ ’ ಅಬ್ಬರ ಜೋರಾಗುತ್ತದೆ. ಭಯಾನಕವಾದ ಮುಖವಾಡಗಳು, ಆಕೃತಿಗಳು, ರಾಕ್ಷಸರಂತಹ ವೇಷಭೂಷಣಗಳು ಮಾರುಕಟ್ಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಖರೀದಿ ಆಗುತ್ತವೆ.
ಇದೊಂದು ಅಭ್ಯಾಸವಾಗಿ ಹೋಗಿದೆ. ಅಕ್ಟೋಬರ್‌ನ ರಾತ್ರಿ ವೇಳೆ ಅಮೆರಿಕದ ಹಲವು ರಾಜ್ಯಗಳಲ್ಲಿ ಜನರು ಬೀದಿಗೆ ಬೀಳುತ್ತಾರೆ. ದೆವ್ವಗಳಂತೆ ವಿಕಾರವಾದ ಮುಖವಾಡ ಧರಿಸುತ್ತಾರೆ. ಕೆಲವರು ಹಳೆಯ ಇಂಗ್ಲೀಷ್ ಸಿನಿಮಾದ ‘ಡ್ರ್ಯಾಕುಲಾ’ ದ ವೇಷ ಧರಿಸುತ್ತಾರೆ. ಎಲ್ಲರೂ ಒಟ್ಟಾಗಿ ರಸ್ತೆಯಲ್ಲಿ ಅಡ್ಡಾಡುತ್ತಾ ನೆರೆಹೊರೆಯವರನ್ನು ಹೆದರಿಸುವ ಆಟ ಆಡುತ್ತಾರೆ.
ನ್ಯೂ ಸೌತ್ ವೇಲ್ಸ್‌ನಲ್ಲೂ ಹೀಗೆ ನಡೆಯುತ್ತಿತ್ತು. ರೀನಿ ರಾರಯನೆ ಎಂಬ ಯುವತಿ ತನ್ನ ಮನೆ ಎದುರು ಉದ್ಯಾನದಲ್ಲಿ ಗೋಣಿಚೀಲದಲ್ಲಿ ಸುತ್ತಿರುವ ಮಾನವನ ದೇಹದಂತೆ ಹೋಲುವ ದೊಡ್ಡ ಆಕೃತಿಯನ್ನು ನೇತುಹಾಕಿದ್ದಳು. ಇದರ ವಿವಿಧ ಭಂಗಿಯ ಫೋಟೊಗಳನ್ನು ಫೇಸ್‌ಬುಕ್‌ನ ತನ್ನ ಖಾತೆಯಲ್ಲೂ ಪೋಸ್ಟ್ ಮಾಡಿದ್ದಳು. ಅದು ಕೂಡ ದೊಡ್ಡ ಹಗ್ಗಕ್ಕೆ ಬಿಗಿದ ಆಕೃತಿ ಸ್ಥಿತಿಯಲ್ಲಿ !
ದಾರಿಹೋಕರ ಪೈಕಿ ಯಾರಿಗೋ ಇದು ಬಹುಶಃ ಹೆಣವನ್ನು ನೇತುಹಾಕಿರಬೇಕು ಎನಿಸಿದೆ. ಹ್ಯಾಲೊವೀನ್ ನೆಪದಲ್ಲಿ ಯಾರದ್ದೋ ಕೊಲೆ ಮಾಡಿ ಅವರ ಶವವನ್ನು ನೇತುಹಾಕಲಾಗಿದೆ ಎಂದುಕೊಂಡು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ರಿನಿ ಮನೆಗೆ ದೌಡಾಯಿಸಿದ ಪೊಲೀಸರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರನ್ನು ಹತ್ಯೆಗೈದೆ ಹೇಳು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
BIG BREAKING: ಒಂದೇ ದಿನ ಮತ್ತೆ 14,348 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಭಾರಿ ಏರಿಕೆ
ಪಾಪ, ಬೆದರಿ ಹೋದ ಯುವತಿಯು ಪೊಲೀಸರಿಗೆ ಹ್ಯಾಲೊವೀನ್ ಅಲಂಕಾರದ ಬಗ್ಗೆ ವಿವರಿಸಿದ್ದಾಳೆ. ನೇತುಹಾಕಿದ್ದ ಆಕೃತಿಯನ್ನು ಇಳಿಸಿ, ತೆರೆದು ತೋರಿಸಿದ್ದಾಳೆ. ಅದರಲ್ಲಿ ಕೇವಲ ಪ್ಲಾಸ್ಟಿಕ್ ಬ್ಯಾಗ್‌ಗಳು, ರಟ್ಟಿನ ಹಾಳೆಗಳು ಇರುವುದನ್ನು ಕಂಡು ಪೊಲೀಸರು ಹೌಹಾರಿದ್ದಾರೆ.
ಅಯ್ಯೋ, ನಾವು ಕೂಡ ಆತುರಕ್ಕೆ ಬಿದ್ದೆವು ಎಂದು ಹಣೆ ಚಚ್ಚಿಕೊಂಡಿದ್ದಾರೆ. ಕೊನೆಗೆ ರನಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರು, ಫೇಸ್‌ಬುಕ್ ಸೂಕ್ತ ವಿವರಣೆ, ಫೋಟೊಗಳ ಸಮೇತ ಕ್ಷಮೆಯಾಚಿಸುವಂತೆ ನಿರ್ದೇಶಿಸಿದ್ದಾರೆ. ಅದಕ್ಕೆ ಒಪ್ಪಿದ ರಿನಿ, ಬಂಧನದಿಂದ ಸ್ವಲ್ಪದರಲ್ಲೇ ಪಾರಾಗಿ ನಿಟ್ಟುಸಿರುಬಿಟ್ಟಿದ್ದಾಳೆ.
SHOCKING: ಕೆಲಸದ ವೇಳೆಯಲ್ಲೇ ಅವಘಡ, 17 ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು
ಅಕ್ಟೋಬರ್ 23ರಂದೇ ರಿನಿ ಕ್ಷಮೆಯಾಚಿಸಿದ್ದರೂ, ಆಕೆಯ ಫೇಸ್‌ಬುಕ್ ಖಾತೆಯಲ್ಲಿ ಹೆಣ ನೇತುಹಾಕಿದಂತೆ ಕಾಣುವ ಗೋಣಿಚೀಲದ ಆಕೃತಿಯ ವಿಡಿಯೊವೊಂದನ್ನು ಈಗಲೂ ಕಾಣಬಹುದಾಗಿದೆ.
https://youtu.be/jBn3qlGXK70