alex Certify ನನ್ನ ಗಂಡ ಅಕ್ರಮ ಸಂಬಂಧ ಹೊಂದಿದ, ನಾನು ಆಕೆಯ ಗಂಡನನ್ನೇ ಪ್ರೀತಿಸಿದೆ…! ಜಾಲತಾಣದಲ್ಲಿ ಹೀಗೊಂದು ವಿಲಕ್ಷಣ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಗಂಡ ಅಕ್ರಮ ಸಂಬಂಧ ಹೊಂದಿದ, ನಾನು ಆಕೆಯ ಗಂಡನನ್ನೇ ಪ್ರೀತಿಸಿದೆ…! ಜಾಲತಾಣದಲ್ಲಿ ಹೀಗೊಂದು ವಿಲಕ್ಷಣ ಕಥೆ

ತಮ್ಮ ಮನಸ್ಸಿನಾಳದ ಮಾತುಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಲವಾರು ಸಾಮಾಜಿಕ ಮಾಧ್ಯಮಗಳು ವೇದಿಕೆ ಕಲ್ಪಿಸುತ್ತವೆ. ಅಂಥವುಗಳಲ್ಲಿ ಒಂದು ರೆಡ್​ಇಟ್​ (Reddit) ಸಮುದಾಯ TrueOffMyChest. ಈ ವೇದಿಕೆಯಲ್ಲಿ ಕೆಲ ಬಳಕೆದಾರರು ತಮ್ಮ ಜೀವನಾನುಭವಗಳನ್ನು ತೆರೆದಿಡುತ್ತಿದ್ದಾರೆ. ಇವುಗಳ ಪೈಕಿ ಕೆಲವೊಂದು ವಿಲಕ್ಷಣ, ವಿಚಿತ್ರ ಎನಿಸುವುದೂ ಉಂಟು. ಅಂಥವುಗಳಲ್ಲಿ ಒಂದು, ಓರ್ವ ಮಹಿಳೆ ಬರೆದಿರುವ ಜೀವನ ಕಥನ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಮ್ಮ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿಯನ್ನು ತಾನು ಪ್ರೀತಿಸುತ್ತಿರುವ ವಿಚಿತ್ರ ಘಟನೆಯೊಂದನ್ನು ಮಹಿಳೆಯೊಬ್ಬಳು ಈ ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ ! ಅಸಲಿಗೆ ಇದು ಸೇಡಿನ ಕಥೆಯಲ್ಲ, ಬದಲಿಗೆ ತಮ್ಮ ಜೀವನದಲ್ಲಿ ಆಗಿರುವ ವಿಚಿತ್ರ ಅನುಭೂತಿ ಎಂದು ಮಹಿಳೆ ಹೇಳಿದ್ದಾರೆ.

ತಮ್ಮ ಜೀವನದ ಕಥೆಯನ್ನು ಹಂಚಿಕೊಂಡಿರುವುದು 36 ವರ್ಷದ ಮಹಿಳೆ. ವಿವಾಹಿತೆಯಾಗಿರುವ ಈ ಮಹಿಳೆಗೆ ಆರು ವರ್ಷದ ಮಗಳಿದ್ದಾಳೆ. ‘ನನ್ನ ಪತಿ ಅವರ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ನನಗೆ ತಿಳಿಯಿತು. ಆ ಸಂದರ್ಭದಲ್ಲಿ ವಿಚ್ಛೇದನ ಕೊಡೋಣ ಎಂದುಕೊಂಡೆ. ಆದರೆ ಕೋವಿಡ್​ನಿಂದಾಗಿ ನಾನು ಕೆಲಸ ಕಳೆದುಕೊಂಡಿದ್ದೆ. ವಿಚ್ಛೇದನ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಈ ಅಕ್ರಮ ಸಂಬಂಧದ ಹೊರತಾಗಿಯೂ ಪತಿಯ ಜತೆ ಹೊಂದಿಕೊಂಡು ಬಾಳುವುದು ಅನಿವಾರ್ಯವಾಗಿತ್ತು’ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ನಂತರದ ಬೆಳವಣಿಗೆಯ ಕುರಿತು ಬರೆದುಕೊಂಡಿರುವ ಮಹಿಳೆ, “ಈ ಅಕ್ರಮದ ವಿಷಯ ನನಗೆ ತಿಳಿದದ್ದು, ಪತಿಯ ಸ್ನೇಹಿತೆಯ ಪತಿಯ ಮೂಲಕ. ತನ್ನ ಪತ್ನಿ ನನ್ನ ಗಂಡನ ಜತೆ ಸಂಬಂಧ ಹೊಂದಿರುವ ಬಗ್ಗೆ ಆಕೆಯ ಪತಿ ನನ್ನ ಬಳಿ ಬಂದು ಹೇಳಿದರು. ಆತನ ಹೆಸರನ್ನು ನಾನು ಹೇಳುವುದಿಲ್ಲ. ‘ಜೆ’ ಎಂದಷ್ಟೇ ಉಲ್ಲೇಖಿಸುತ್ತೇನೆ. ‘ಜೆ’ ನನ್ನ ಬಳಿ ಬಂದು ವಿಷಯ ತಿಳಿಸಿದ್ದೂ ಅಲ್ಲದೇ ನನ್ನ ಪತಿ ಮತ್ತು ಅವರ ಪತ್ನಿ ಹೋಟೆಲ್​ ಸೇರಿದಂತೆ ಅನೇಕ ಕಡೆ ತಿರುಗಾಡಿದ್ದು, ಸಂಬಂಧ ಹೊಂದಿರುವ ಬಗ್ಗೆ ದಾಖಲೆ ತೋರಿಸಿದಾಗ ನಾನು ಶಾಕ್​ ಆದೆ” ಎಂದು ಮಹಿಳೆ ಬರೆದಿದ್ದಾರೆ.

“ನಂತರ ನಡೆದದ್ದೆಲ್ಲವೂ ವಿಚಿತ್ರವೇ. ನಾನು ನನ್ನ ಗಂಡನಿಗೆ ಹಾಗೂ ‘ಜೆ’ ಅವರ ಪತ್ನಿಗೆ ಬುದ್ಧಿ ಕಲಿಸಲು ತೀರ್ಮಾನಿಸಿದೆವು. ಆದರೆ ಅದಕ್ಕೂ ಮುನ್ನ ಚೆನ್ನಾಗಿ ಯೋಜನೆ ರೂಪಿಸಬೇಕಿತ್ತು. ಇದಕ್ಕಾಗಿ ನಾವಿಬ್ಬರೂ ಭೇಟಿಯಾಗತೊಡಗಿದೆವು, ಫೋನ್​ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದೆವು. ಆದರೆ ಅದ್ಹೇಗೋ ಗೊತ್ತಿಲ್ಲ ನಮ್ಮ ನಡುವೆ ಪ್ರೀತಿ ಚಿಗುರೊಡೆಯಿತು. ಪರಸ್ಪರ ಪ್ರೀತಿಸಲು ಶುರು ಮಾಡಿದೆವು. ಇಬ್ಬರೂ ಒಟ್ಟಿಗೇ ಪಿಕ್​ನಿಕ್​ ಮಾಡಿದಾಗ ಮೊದಲಿಗೆ ನಾನು ಅವರನ್ನು ಪ್ರೀತಿಸುತ್ತಿದ್ದೇನೆ ಎನ್ನಿಸತೊಡಗಿತು. ಆದರೆ ಈ ವಿಷಯವನ್ನು ಅವರ ಬಳಿ ಕೇಳಲು ಹಿಂಜರಿಕೆಯಾಯಿತು. ಆದರೆ ಒಂದು ದಿನ ಅವರೇ ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವುದಕ್ಕೆ ನಾನು ಸಂತೋಷ ಪಡುತ್ತಿದ್ದೇನೆ ಎಂದಾಗ ಅವರೂ ನನ್ನನ್ನು ಪ್ರೀತಿಸುತ್ತಿರುವ ವಿಷಯ ತಿಳಿಯಿತು. ಹೀಗೆ ನಮ್ಮ ಪ್ರೀತಿ ಮುಂದುವರೆದಿದೆ. ಮುಂದೆ ಏನು ಮಾಡಬೇಕೋ ತೋಚದಾಗಿದೆ” ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಇದಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ಕೆಲವರು ಈ ಸಂಬಂಧ ತಪ್ಪು ಎಂದಿದ್ದರೆ, ಇನ್ನು ಹಲವರು ಈ ಪ್ರೀತಿಯನ್ನು ಮುಂದುವರೆಸಿ ಒಟ್ಟಿಗೇ ಬಾಳಿ ಎಂದು ಸಲಹೆ ಇತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...