ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಳು. ಆಕೆ ತನ್ನ ಬೇಬಿ ಬಂಪ್ ನ (ಗರ್ಭಿಣಿ) ಫೋಟೋವನ್ನು ಹಂಚಿಕೊಂಡಿದ್ದರೆ, ಹಲವಾರು ಮಂದಿ ಇದು ನಿಜವಲ್ಲ, ಆಕೆ ಸುಳ್ಳು ಹೇಳುತ್ತಿದ್ದಾಳೆ ಅಂದಿದ್ದರು.
ಸಾಕಷ್ಟು ಟೀಕೆಗಳ ನಡುವೆ ಮಾರ್ಚ್ ನಲ್ಲಿ ಮಗುವಿಗೆ ಸೋಫಿಯಾ ಕವಚಿನಿ ಜನ್ಮ ನೀಡಿದ್ದಾಳೆ. ಆದರೆ, ಈ ಮೊದಲು ಆಕೆಯ ಗರ್ಭಾವಸ್ಥೆಯಲ್ಲಿ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. ಈಕೆಯನ್ನು ಸುಳ್ಳಿ ಎಂದೆಲ್ಲಾ ಆರೋಪಿಸಲಾಗಿತ್ತು. ಅದಕ್ಕೆ ಕಾರಣವೇನೆಂದರೆ, ಗರ್ಭಿಣಿಯಾಗಿದ್ದರೂ ಕೂಡ ಈಕೆಯ ಹೊಟ್ಟೆ ಮಾತ್ರ ಚಿಕ್ಕದಾಗಿತ್ತು.
ಟಿಕ್ ಟಾಕ್ನಲ್ಲಿ ತನ್ನ ಬೇಬಿ ಬಂಪ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಳು. ಈ ವೇಳೆ ಕೆಲವರು ಆಕೆ ನಿಜವಾಗಿಯೂ ಗರ್ಭಿಣಿಯೇ ಎಂದೆಲ್ಲಾ ಪ್ರಶ್ನಿಸಿದ್ದರು. ಏಕೆಂದರೆ, ಇತರ ಗರ್ಭಿಣಿಯರಿಗೆ ಹೋಲಿಸಿದರೆ ಆಕೆಯ ಹೊಟ್ಟೆ ಚಿಕ್ಕದಾಗಿತ್ತು.
ಬಂಪ್ ಗಾತ್ರವು ಪ್ರತಿ ತಾಯಿಗೆ ಬದಲಾಗಬಹುದು ಎಂಬುದು ಸತ್ಯ. ಆದರೆ ಸೋಫಿಯಾ ತನ್ನ 7 ತಿಂಗಳ ಬಂಪ್ನ ಫೋಟೋವನ್ನು ಹಂಚಿಕೊಂಡಾಗ, ನೆಟ್ಟಿಗರು ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದೇ ಆರೋಪಿಸಿದ್ದರು. ಇನ್ನೂ ಕೆಲವರು ಸಣ್ಣ ಬಂಪ್ ಹೊಂದಿರುವ ತಮ್ಮದೇ ಕಥೆಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಸೋಫಿಯಾ ತನ್ನ 9 ತಿಂಗಳ ಬೇಬಿ ಬಂಪ್ನ ವಿಡಿಯೋವನ್ನು ಹಂಚಿಕೊಂಡಾಗಲೂ, ಈಕೆಯ ಗರ್ಭಧಾರಣೆಯನ್ನು ನಕಲಿ ಅಂತಾನೇ ಹೇಳಿದ್ದಾರೆ. ಆದರೆ ಆಕೆ ಮಾರ್ಚ್ ನಲ್ಲಿ ಮಗುವಿಗೆ ಜನ್ಮ ನೀಡಿದಾಗ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಾಯಿತು.