alex Certify ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..!

ಅದೇ ಉದ್ಯೋಗ, ಅದೇ ಸ್ಥಾನ ಮತ್ತು ಅದೇ ಜವಾಬ್ದಾರಿಗಳನ್ನು ಹೊಂದಿರುವ ಪುರುಷ ಸಹೋದ್ಯೋಗಿಯೊಬ್ಬರು ತನಗಿಂತ £40,000 (ರೂ.40 ಲಕ್ಷ) ಹೆಚ್ಚು ಗಳಿಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ ಬ್ರಿಟಿಷ್ ಮಹಿಳೆಯೊಬ್ಬರಿಗೆ 2 ಮಿಲಿಯನ್ ಪೌಂಡ್ ಅಂದರೆ 20 ಕೋಟಿಗೂ ಹೆಚ್ಚು ಪರಿಹಾರವನ್ನು ನೀಡಲಾಗಿದೆ.

50 ವರ್ಷದ ಸ್ಟೇಸಿ ಮ್ಯಾಕೆನ್ ಅವರು ಫ್ರೆಂಚ್ ಬ್ಯಾಂಕ್ BNP ಪರಿಬಾಸ್ ವಿರುದ್ಧ ಲೈಂಗಿಕ ತಾರತಮ್ಯ, ವಿಕ್ಟಿಮೈಸೇಷನ್ ಮತ್ತು ಅಸಮಾನ ವೇತನಕ್ಕಾಗಿ ಮೊಕದ್ದಮೆ ಹೂಡಿದರು. ನಾಲ್ಕು ವರ್ಷಗಳ ಅವಧಿಯಲ್ಲಿ, ಸಂಬಳ ಮತ್ತು ಬೋನಸ್‌ಗಳಲ್ಲಿ ತನ್ನ ಪುರುಷ ಸಹೋದ್ಯೋಗಿಗಳಿಗಿಂತ ನನಗೆ ನೂರಾರು ಸಾವಿರ ಪೌಂಡ್‌ಗಳನ್ನು ಕಡಿಮೆ ನೀಡಿದ್ದಾರೆಂದು ಆಕೆ ಹೇಳಿಕೊಂಡಿದ್ದಾಳೆ.

ಬಲು ರುಚಿಕರ ಕೇರಳ ಸ್ಟೈಲ್ ಮೀನಿನ ಸಾರು ನೀವೂ ಒಮ್ಮೆ ಟ್ರೈ ಮಾಡಿ

ಮೊದಲು ಆಕೆ ಈ ತಾರತಮ್ಯದ ಬಗ್ಗೆ ದೂರು ನೀಡಿದಾಗ, ಅವರನ್ನ ವಿಚಿತ್ರವಾಗಿ ನೋಡಲು ಶುರುಮಾಡಿದರು. ಆದರೂ ಛಲಬಿಡದ ಸ್ಟೇಸಿ £2,081,449 ಪರಿಹಾರವನ್ನು ಗೆದ್ದಿದ್ದಾರೆ, ಇದು ಬ್ರಿಟಿಷ್ ಟ್ರಿಬ್ಯೂನಲ್ ನೀಡಿದ ಅತಿದೊಡ್ಡ ಮೊತ್ತಗಳಲ್ಲಿ ಒಂದಾಗಿದೆ. ಸ್ಟೇಸಿಯ ಪುರುಷ ಮೇಲಧಿಕಾರಿಗಳು “ಹಗೆತನದಿಂದ ಮತ್ತು ಪ್ರತೀಕಾರದಿಂದ” ವರ್ತಿಸಿದರು ಮತ್ತು ಬ್ಯಾಂಕ್ ಸ್ಟೇಸಿ ಅವರ ಬಳಿ ಕ್ಷಮೆಯಾಚಿಸಲು ವಿಫಲವಾದ ಕಾರಣ ಅವಳ ಪರಿಹಾರವನ್ನು ನ್ಯಾಯಾಧೀಶರು ಹೆಚ್ಚಿಸಿದ್ದಾರೆಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಹಿಂದೆ ಡಯ್ಚ್ ಬ್ಯಾಂಕ್‌ನಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ನಂತರ ಸ್ಟೇಸಿಯನ್ನು 2013 ರಲ್ಲಿ ಪರಿಬಾಸ್‌ನಲ್ಲಿ £120,000 (Rs 1.21 ಕೋಟಿ) ಸಂಬಳದಲ್ಲಿ ನೇಮಿಸಲಾಯಿತು. ಅದೇ ಕೆಲಸದ ಶೀರ್ಷಿಕೆ ಮತ್ತು ಜವಾಬ್ದಾರಿಗಳೊಂದಿಗೆ ಪುರುಷ ಸಹೋದ್ಯೋಗಿಯನ್ನು ನೇಮಿಸಲಾಯಿತು. ಆದರೆ ಪುರುಷ ಉದ್ಯೋಗಿಯ ಸಂಬಳ £160,000 (ರೂ. 1.62 ಕೋಟಿ) ಇದೆ. ಅಂದರೆ ಆಕೆಗಿಂತ ಹೆಚ್ಚು ಪಾವತಿಸಲಾಗುತ್ತಿದೆ ಎಂದು ಕಂಡುಕೊಂಡರು. ಈ ಬಗ್ಗೆ ಆಕೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದಾಗಲೂ ಅವರ ತಾರತಮ್ಯ ಮುಂದುವರೆದಿತ್ತು ಎಂದು ಸ್ಟೇಸಿ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...