
ತಮ್ಮ ಸಹೋದರಿಯ ಸಾಹಸದಿಂದಾಗಿ ಮೊಸಳೆ ಬಾಯಿಂದ ಬಚಾವಾಗಿ ಬಂದ ಬ್ರಿಟನ್‌ನ 28ರ ಹರೆಯದ ಮಹಿಳೆಯೊಬ್ಬರು ಕೋಮಾ ಸ್ಥಿತಿಯಿಂದ ಗುಣಮುಖರಾಗಿ ಎಂದಿನ ಜೀವನಕ್ಕೆ ಮರಳಿದ್ದಾರೆ.
ಮೆಲಿಸ್ಸಾ ಹಾಗೂ ಜಾರ್ಜಿಯಾ ಲೌರಿ ಹೆಸರಿನ ಈ ಅವಳಿ ಸಹೋದರಿಯರು ಮೆಕ್ಸಿಕೋದ ಕರಾವಳಿಯ ಮನಿಯಾಲ್ಟೆಪೆಕ್ ಲಗೂನ್‌ನಲ್ಲಿ ದೋಣಿಯಲ್ಲಿ ತೆರಳುತ್ತಿದ್ದರು. ಜೈವಿಕ ಪ್ರಕಾಶದ ಪ್ರಾಕೃತಿಕ ವಿದ್ಯಮಾನ ಘಟಿಸುವ ಜಾಗ ಇದಾಗಿದೆ.
ಮತ್ತೆ ಬೀದಿಗೆ ಬಂದ ಬಳಿಕ ಯೂಟ್ಯೂಬರ್ ಕ್ಷಮೆಯಾಚಿಸಿದ ʼಬಾಬಾ ಕಾ ಡಾಬಾʼ ಮಾಲೀಕ
ಪೋಟೋ ಎಸ್ಕಾನ್‌ಡಿಡೋ ಎಂಬ ಬಂದರು ಪಟ್ಟಣದಿಂದ 10 ಮೈಲಿ ದೂರದಲ್ಲಿರುವ ಲಗೂನ್‌ನಲ್ಲಿ ಇರುಳಿನ ವೇಳೆ ಈಜುತ್ತಿದ್ದ ಸಹೋದರಿಯರ ಮೇಲೆ ಮೊಸಳೆಯೊಂದು ದಾಳಿ ಮಾಡಿದೆ. ಏನೋ ಎಡವಟ್ಟಾಗಿದೆ ಎಂದು ಅರಿತ ಜಾರ್ಜಿಯಾ ತನ್ನ ಸಹೋದರಿಯ ಹೆಸರನ್ನು ಕೂಗಿದ್ದಾರೆ. ಇದಕ್ಕೆ ಏನನ್ನೂ ಪ್ರತಿಕ್ರಿಯಿಸದ ತಮ್ಮ ಸಹೋದರಿಯನ್ನು ಹುಡುಕಲಾರಂಭಿಸಿದ್ದಾರೆ ಜಾರ್ಜಿಯಾ.
ಮೊಸಳ ಕೈಗೆ ಸಿಕ್ಕಿದ್ದ ಮೆಲಿಸ್ಸಾ ಮುಖಕೆಳಗಾಗಿ ನೀರಿನಾಳಕ್ಕೆ ಬಿದ್ದಿದ್ದನ್ನು ಕಂಡ ಜಾರ್ಜಿಯಾ, ಮೊಸಳೆಯೊಂದಿಗೆ ಗುದ್ದಾಡಿಕೊಂಡು ಹೇಗೋ ತನ್ನ ಸಹೋದರಿಯನ್ನು ಬಚಾವ್ ಮಾಡಿಕೊಂಡಿದ್ದಾರೆ.
ವಿವಿಧ ಯೋಜನೆಯಡಿ ಖಾತೆಗೆ ಹಣ ಜಮಾ, ಫಲಾನುಭವಿಗಳ ಪಾವತಿ ಸ್ಥಿತಿ ಪರಿಶೀಲಿಸುವ ಡಿಬಿಟಿ ಮೊಬೈಲ್ ಆಪ್
ನಾಲ್ಕು ಬಾರಿ ಮೊಸಳೆ ದಾಳಿ ಮಾಡಿದ್ದ ಕಾರಣ, ಮೈ ಎಲ್ಲಾ ಗಾಯಗಳಾಗಿ ಕೆಲ ದಿನಗಳ ಮಟ್ಟಿಗೆ ಕೋಮಾ ಸ್ಥಿತಿ ತಲುಪಿದ್ದ ಮೆಲಿಸ್ಸಾಗೆ ಇದೀಗ ತಾನೇ ಪ್ರಜ್ಞೆ ಬಂದಿದ್ದು, ಸ್ವತಂತ್ರವಾಗಿ ಉಸಿರಾಡುತ್ತಿದ್ದಾರೆ. ಬ್ರಿಟನ್‌ನ ಬರ್ಕ್‌ಶೈರ್‌ನವರಾದ ಈ ಸಹೋದರಿಯರು ವನ್ಯಜೀವಧಾಮಗಳ ಮೇಲೆ ಸಂಶೋಧನೆ ಮಾಡಲು ಮೆಕ್ಸಿಕೋದಲ್ಲಿ ಇದ್ದರು.