ಮಹಿಳೆಯೊಬ್ಬರು ಗಾಯಗೊಂಡು ರೆಕ್ಕೆ ತುಂಡಾಗಿದ್ದ ಚಿಟ್ಟೆಗೆ ಆರೈಕೆ ಮಾಡಿ ಅದರ ಶುಶ್ರೂಷೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹೌದು, ತುಂಡಾಗಿದ್ದ ಚಿಟ್ಟೆಯ ರೆಕ್ಕೆ ಜಾಗಕ್ಕೆ ಗರಿಯನ್ನು ಅಂಟಿಸಿದ ಡೇಲಿಯಾ ಅದಕ್ಕೆ ಮರುಜೀವ ನೀಡಿದ್ದಾರೆ.
ಐಫೋನ್ 13 ಲಾಂಚ್ ವೇಳೆ ‘ಧಮ್ ಮಾರೋ ಧಮ್’ ಟ್ಯೂನ್..!
ಮೊದಲಿಗೆ ಚಿಟ್ಟೆಗೆ ಹಾರಲಾಗದಿದ್ದರೂ ನಂತರ ನಿಧಾನವಾಗಿ ಹಾರಲು ಕಲಿತಿದೆ. ನಂತರ ಅದನ್ನು ಹೊರಗಿನ ವಾತವರಣಕ್ಕೆ ಬಿಡಲಾಯಿತು. ಒಂದು ದಿನ ಅದು ಮೇಲಕ್ಕೆ ಹಾರುತ್ತಾ ಹೊರಟು ಹೋಗಿದೆ.
ಎರಡು ದಿನಗಳ ನಂತರ ಮತ್ತೆ ಹೂಗಿಡಗಳ ಮಧ್ಯೆ ಅದೇ ಚಿಟ್ಟೆ ಕಾಣಸಿಕ್ಕಿದೆ. ಚಿಟ್ಟೆಗೆ ಮರುಜೀವ ನೀಡಿರುವುದು ತನಗೆ ಧನ್ಯತಾಭಾವ ತುಂಬಿದೆ ಎಂದು ಡೇಲಿಯಾ ಹೇಳಿದ್ದಾರೆ. ಇನ್ನು ಚಿಟ್ಟೆಗೆ ಮರುಜೀವ ನೀಡಿದ್ದಕ್ಕೆ ನೆಟ್ಟಿಗರು ಡೇಲಿಯಾ ಅವರನ್ನು ಹಾಡಿ ಹೊಗಳಿದ್ದಾರೆ.
https://youtu.be/szXixszN4g4