ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿದ್ದ ಬ್ರೆಜಿಲ್ ನ ಮಾಡೆಲ್ ಕ್ರಿಸ್, ಮೂರು ತಿಂಗಳ ನಂತರ ಇದೀಗ ವಿಚ್ಛೇದನ ಪಡೆದಿದ್ದಾಳೆ.
ಹೌದು, ತನ್ನನ್ನು ತಾನೇ ಮದುವೆಯಾಗಿ ಬಹಳ ಸಂತೋಷದಲ್ಲಿರುವುದಾಗಿ ಹೇಳಿದಾಕೆ, ಇದೀಗ ಬೇರೊಬ್ಬರನ್ನು ಭೇಟಿಯಾದ ನಂತರ ತನ್ನ ಮನಸ್ಸನ್ನು ಬದಲಾಯಿಸಿ ತನಗೆ ತಾನೇ ವಿಚ್ಛೇದನ ಕೊಟ್ಟುಕೊಂಡಿದ್ದಾಳೆ.
31 ವರ್ಷದ ಮಾಡೆಲ್ ಆಗಿರುವ ಕ್ರಿಸ್ ಗಲೇರಾ ಪುರುಷರಿಂದ ಮೋಸ ಹೋಗಿ ಬೇಸತ್ತಿದ್ದಳು. ಹೀಗಾಗಿ ಈಕೆ ಸೆಪ್ಟೆಂಬರ್ನಲ್ಲಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದ್ದಳು. ಅಲ್ಲದೆ ಒಬ್ಬಂಟಿಯಾಗಿರುವುದೇ ತನಗಿಷ್ಟ, ತನ್ನನ್ನೇ ತಾನು ಪ್ರೀತಿಸುವುದಾಗಿ ಹೇಳಿಕೊಂಡಿದ್ದಳು. ಆದರೆ, ಕೇವಲ 90 ದಿನಗಳಲ್ಲಿ ತನಗೆ ತಾನೇ ಹೆಂಡತಿ/ಗಂಡನಾದ ನಂತರ ಅವಳಿಗೆ ಸಾಕಾಗಿದೆ ಎಂದು ತೋರುತ್ತದೆ. ಹೀಗಾಗಿ ವಿಚ್ಛೇದನ ಪಡೆಯುತ್ತಿದ್ದಾಳೆ.
ಬ್ರೆಜಿಲ್ನ ಸಾವೊ ಪಾಲೊದ ಕ್ರಿಸ್, ವಿಶೇಷ ವ್ಯಕ್ತಿಯನ್ನು ಭೇಟಿಯಾದ ನಂತರ ತಾನು ಅವನನ್ನು ಪ್ರೀತಿಸಿದ್ದಾಗಿ ಹೇಳಿದ್ದಾಳೆ. ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಕ್ರಿಸ್ ಗೆ, ಅಂದಿನಿಂದ ಪ್ರೀತಿಯ ಮೇಲೆ ನಂಬಿಕೆ ಉಂಟಾಯಿತಂತೆ.
ಇನ್ನು ಈ ಹಿಂದೆ ತನ್ನ ಮದುವೆಯ ದಿನದಂದು, ಬ್ರೆಜಿಲ್ನ ಸಾವೊ ಪಾಲೊದಲ್ಲಿನ ಕ್ಯಾಥೋಲಿಕ್ ಚರ್ಚ್ನ ಮುಂದೆ ಕ್ರಿಸ್ ಫೋಟೋಗೆ ಪೋಸ್ ನೀಡಿದ್ದಳು. ಬೆರಗುಗೊಳಿಸುವ ಬಿಳಿ ಉಡುಗೆ ಮತ್ತು ಆಕರ್ಷಕ ನೆಕ್ಲೇಸ್ ಧರಿಸಿದ್ದಳು.