ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ ಮಗುವಿಗೆ ಜನ್ಮವಿತ್ತು, ಗಂಡು ಮಗು ರೇಮಂಡ್‌ನೊಂದಿಗೆ ವಿಮಾನವಿಳಿದಿದ್ದಾರೆ.
’ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿರುವುದು’ ಎಂಬ ಮಾತನ್ನು ನೆನಪಿಸುವಂತೆ, ಲವಿನಿಯಾ ಸಂಚರಿಸುತ್ತಿದ್ದ ಡೆಲ್ಟಾ ಏರ್‌ಲೈನ್ಸ್‌ನ ಫ್ಲೈಟ್‌ನಲ್ಲಿ ವೈದ್ಯರು ಹಾಗೂ ಮೂವರು ನರ್ಸ್‌ಗಳೂ ಇದ್ದರು. ಪೆಸಿಫಿಕ್ ಸಾಗರದ ಮೇಲೆ ವಿಮಾನ ಹಾರಾಡುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಇಳಿದ ವೈದ್ಯರು ಹಾಗೂ ನರ್ಸ್‌ಗಳು ಕೇವಲ 29 ವಾರಗಳ ಕಾಲ ಗರ್ಭದಲ್ಲಿದ್ದ ಮಗುವನ್ನು ಸುರಕ್ಷಿತವಾಗಿ ಲೌಕಿಕ ಜಗತ್ತಿಗೆ ಕರೆತಂದಿದ್ದಾರೆ.
SHOCKING NEWS: ವಿದ್ಯುತ್ ಬೇಲಿಗೆ ಬಲಿಯಾದ ರೈತ; ಮಾಲೀಕನನ್ನು ಹಿಡಿದು ಹೊಡೆದು ಕೊಂದ ಸ್ಥಳೀಯರು
ಇದೇ ವೇಳೆ ವಿಮಾನದಲ್ಲಿದ್ದ ಸಹ ಪ್ರಯಾಣಿಕೆ ಜೂಲಿಯಾ ಹಾನ್ಸೆನ್ ಈ ವಿದ್ಯಮಾನವನ್ನು ತನ್ನ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿದ್ದಾರೆ.
ವಿಮಾನದ ಇಂಟರ್‌ಕಾಂ ಮೂಲಕ ಸಿಬ್ಬಂದಿಯೊಬ್ಬರು, “ತಾಯಿಗೊಂದು ಸುತ್ತಿನ ಕರತಾಡನ ನೀಡೋಣ. ಶುಭಾಶಯಗಳು,” ಎಂದು ಘೋಷಿಸುತ್ತಲೇ, ಸಹ ಪ್ರಯಾಣಿಕರೆಲ್ಲಾ ಚಪ್ಪಾಳೆ ತಟ್ಟುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.