alex Certify ಕೇವಲ ಒಂದು ಯೂರೋಗೆ ಮನೆ ಖರೀದಿಸಿದ ಮಹಿಳೆ; ಅದರ ಬೆಲೆಯೀಗ ಕೋಟಿ ಕೋಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಒಂದು ಯೂರೋಗೆ ಮನೆ ಖರೀದಿಸಿದ ಮಹಿಳೆ; ಅದರ ಬೆಲೆಯೀಗ ಕೋಟಿ ಕೋಟಿ….!

Woman who bought one of Italy's 'one euro houses' reveals truth behind the scheme

ಇಟಲಿಯಲ್ಲಿ ಕೇವಲ ಒಂದು ಯೂರೋಗೆ ಮಹಿಳೆಯೊಬ್ಬರು ಮನೆ ಖರೀದಿಸಿದ್ದಾರೆ. ಅರೆ ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬಹುದು. ಇದರ ಹಿಂದಿದೆ ಅದೊಂದು ಯೋಜನೆ. ಇಟಲಿಯ ಸಾಂಬುಕಾ ಡಿ ಸಿಸಿಲಿಯಾದಲ್ಲಿರುವ ಖಾಲಿ ಮನೆಗಳನ್ನು ಪುರಸಭೆ ಕೇವಲ 1ಯೂರೋಗೆ ನೀಡುತ್ತದೆ. ಇಲ್ಲಿನ ನಿವಾಸಿಗಳು ಹಲವಾರು ಕಾರಣಗಳಿಂದ ವಲಸೆ ಹೋಗಿದ್ದು ಹಲವು ಪಟ್ಟಣಗಳಲ್ಲಿ ಮನೆಗಳು ಖಾಲಿ ಬಿದ್ದಿರುವುದರಿಂದ ಅವುಗಳನ್ನು ನಿಬಂಧನೆಗಳ ಮೇಲೆ ಕೇವಲ 1 ಯುರೋಗೆ ನೀಡಿ ಅವುಗಳನ್ನು ಅಭಿವೃದ್ಧಿ ಮಾಡುವ ಯೋಜನೆಯನ್ನ ಪುರಸಭೆಗಳು ಮಾಡಿವೆ.

ಈ ಬಗ್ಗೆ ಸ್ನೇಹಿತೆಯಿಂದ ಮಾಹಿತಿ ಪಡೆದ ಅಮೆರಿಕದ 45 ವರ್ಷದ ಮೆರೆಡಿತ್ ಟಬ್ಬೋನ್ ಎಂಬಾಕೆ ಕೇವಲ ಒಂದು ಯೂರೋಗೆ ಪಾಳು ಬಿದ್ದ ಮನೆ ಖರೀದಿಸಿ ಇದೀಗ ಅದನ್ನು ತಮ್ಮ ಸುಂದರ ಕನಸಿನ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಮನೆಯಲ್ಲಿ ಸ್ಪಾ, ಹೊರಾಂಗಣ ಅಡುಗೆಮನೆ, ಪಾರ್ಟಿ ಹಾಲ್ ಮತ್ತು ವೈನ್ ಸೆಲ್ಲಾರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದ್ದು ಇದೀಗ ಅದರ ಮೌಲ್ಯ 4 ಕೋಟಿಗೂ ಹೆಚ್ಚು ರೂ. ಆಗಿದೆ.

ಮೆರೆಡಿತ್ 2016 ರಲ್ಲಿ ಇಟಾಲಿಯನ್ ಪೌರತ್ವವನ್ನು ಹೇಗೆ ಪಡೆಯುವುದು ಎಂದು ಸಂಶೋಧಿಸಲು ಪ್ರಾರಂಭಿಸಿದಾಗ ಆಕೆಯ ತಂದೆ ಮೈಕೆಲ್ ಅವರ ಮುತ್ತಜ್ಜ ಫಿಲಿಪ್ಪೊ ಟಬ್ಬೋನ್ ಅವರು ಸಿಸಿಲಿಯ ಸಣ್ಣ ಹಳ್ಳಿಯಾದ ಸಾಂಬುಕಾ ಡಿ ಸಿಸಿಲಿಯಾದಿಂದ ಬಂದಿದ್ದಾರೆ ಎಂಬುದು ಗೊತ್ತಾಯಿತು.

ಇಟಲಿಯಲ್ಲಿ ಒಂದು ಯೂರೋಗೆ ಮನೆಗಳನ್ನು ಬಿಡ್ ಮಾಡುವ ಕುರಿತು ಲೇಖನವನ್ನು ಓದಿದ ನಂತರ, ಮೆರೆಡಿತ್ ಜನವರಿ 2019 ರಲ್ಲಿ ಮನೆ ಖರೀದಿಗೆ ಬಿಡ್ ಮಾಡಿ ಅದನ್ನು ಖರೀದಿಸುವಲ್ಲಿ ಯಶಸ್ವಿಯಾದರು. ಒಂದು ತಿಂಗಳ ನಂತರ ರಿಪೇರಿ ಮತ್ತು ಮನೆಗೆ ಹೊಸ ರೂಪ ಕೊಡುವ ಕೆಲಸವನ್ನು ಪ್ರಾರಂಭಿಸಿದರು. ಪರಿಸರ ಸುರಕ್ಷಿತ ರೀತಿಯಲ್ಲಿ ಛಾವಣಿಯನ್ನು ತೆಗೆದುಹಾಕಲು 69 ಸಾವಿರ ರೂ. ಖರ್ಚು ಮಾಡಿದರು.

ಆಗಸ್ಟ್ 2020 ರಲ್ಲಿ, ಅವರು ಖಾಸಗಿ ಮಾರಾಟದ ಮೂಲಕ ಪಕ್ಕದ ಮನೆಯನ್ನು ಖರೀದಿಸಿ ತಮ್ಮ ಆಸ್ತಿಯ ವಿಸ್ತೀರ್ಣವನ್ನು 3,000 ಚದರ ಅಡಿಗೆ ವಿಸ್ತರಿಸಿಕೊಂಡರು.

ಬಳಿಕ ಮೆರೆಡಿತ್ ಅವರು ಅದೇ ಗ್ರಾಮದಲ್ಲಿ ಎರಡು ಅತಿಥಿ ಗೃಹಗಳನ್ನು ಒಟ್ಟು 29 ಲಕ್ಷ ರೂ.ಗೆ ಖರೀದಿಸಿದ್ದಾರೆ, ಇದಕ್ಕೆ ಸಣ್ಣ ರಿಪೇರಿ ಕೆಲಸ ಅಗತ್ಯವಿದೆ. ಇದರೊಂದಿಗೆ 61 ಲಕ್ಷ ರೂಪಾಯಿಗೆ ಮತ್ತೊಂದು ಕಟ್ಟಡ ಖರೀದಿಸಿ ಅದನ್ನು ಕಲಾ ಗ್ಯಾಲರಿ ಮತ್ತು ಕಲಾವಿದರು ಉಳಿದುಕೊಳ್ಳಲು ಅಪಾರ್ಟ್ಮೆಂಟ್ ಆಗಿ ಪರಿವರ್ತಿಸುತ್ತಿದ್ದಾರೆ.

ಐದು ವರ್ಷಗಳ ಕಠಿಣ ಪರಿಶ್ರಮದ ನಂತರ, ಮೆರೆಡಿತ್ ಅವರ ರಜಾದಿನದ ಮನೆಯನ್ನು ಅಂತಿಮವಾಗಿ ಏಪ್ರಿಲ್ 2024 ರಲ್ಲಿ ಪೂರ್ಣಗೊಳಿಸಿದ್ದು, ಈಗ ಇಟಲಿಯಲ್ಲಿ ಅವರು ವರ್ಷಕ್ಕೆ ನಾಲ್ಕು ತಿಂಗಳುಗಳನ್ನು ಕಳೆಯುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...