ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ.
ನಾನು ಮತ್ತು ಪತಿ ಒಂದು ದಿನ ಸಮುದ್ರದ ಬಳಿ ಹೋಗುವಾಗ ಬಿರುಗಾಳಿ ಬಂತು. ಆ ಸಮಯದಲ್ಲಿ ಒಂದು ವಸ್ತು ಹೊರಹೊಮ್ಮುವುದನ್ನು ನೋಡಿದೆ. ಹತ್ತಿರ ಹೋಗಿ ನೋಡಿದರೆ ಈಜಿಪ್ಟ್ ದೇವತೆಯ ಪ್ರತಿಮೆಯಾಗಿತ್ತು ಎಂದು ಲೋಡ್‌ನ ನಿವಾಸಿ ಮತ್ತು ಅಜೆರ್ಬೈಜಾನಿ ವಲಸಿಗರಾದ ಲಿಡಿಯಾ ಮಾರ್ನರ್ ಹೇಳಿದ್ದಾರೆ.
ಮಾರ್ನರ್ ಪುರಾತತ್ತ್ವ ಶಾಸ್ತ್ರದಲ್ಲಿ ತಿಳಿದಿರುವ ಸ್ನೇಹಿತರನ್ನು ಸಂಪರ್ಕಿಸಿದ ಬಳಿಕ ಇದನ್ನು ಪುರಾತತ್ವ ಇಲಾಖೆಗೆ ಸಂಶೋಧನೆಗೆ ಕಳುಹಿಸಲಾಗಿದೆ. ಪ್ರತಿಮೆಯಲ್ಲಿ ಬರೆದಿರುವ ಅಕ್ಷರಗಳನ್ನು ಓದಲಾಗುತ್ತಿದೆ. ಹಿಂದಿನ ಕಾಲದಲ್ಲಿ ನಮ್ಮ ಪ್ರದೇಶವನ್ನು ಆಳಿದ ಈಜಿಪ್ಟಿನವರು ಧಾರ್ಮಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಅದರ ಕುರುಹಾಗಿ ಇದು ಸಿಕ್ಕಿರಬಹುದು ಎಂದು ಊಹಿಸಲಾಗಿದೆ. ಪ್ರತಿಮೆಯನ್ನು ಜೇಡಿಮಣ್ಣಿನಿಂದ ಮಾಡಲಾಗಿದ್ದು, ಇದನ್ನು ಕಲ್ಲಿನ ಮಾದರಿಯಲ್ಲಿ ಹುದುಗಿಸಲಾಗಿದೆ.