
ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ವಿಡಿಯೋಗಳು ಮುದ್ದಾಗಿದ್ದಲ್ಲಿ, ಕೆಲವೊಂದು ವಿಡಿಯೋಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ.
ಶಾಪಿಂಗ್ ಮಾಲ್ ಒಂದರಲ್ಲಿ ಓಡಾಡುತ್ತಿರುವ ಮಹಿಳೆಯೊಬ್ಬರತ್ತ ಅಲ್ಲಿನ ಕ್ಯಾಮೆರಾ ಒಂದನ್ನು ಜ಼ೂಮ್ ಮಾಡಿ ನೋಡಿದಾಗ ಆಕೆಯ ತಲೆ ಮೇಲೆ ಹಾವಿನ ಮರಿಯೊಂದನ್ನು ಹೇರ್‌ಬ್ಯಾಂಡ್ ಆಗಿ ಕಟ್ಟಿರುವುದು ಕಂಡು ಬಂದಿದೆ.
ಆಮೆಗಳಿಗೆ ಬಿಸಿ ನೀರು, ಆನೆಮರಿಗಳಿಗೆ ಕಂಬಳಿ ಹೊದಿಕೆ..! ಚಳಿಗಾಲದಲ್ಲಿ ಪ್ರಾಣಿಗಳಿಗೆ ವಿಶೇಷ ಆರೈಕೆ
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಈ ವಿಡಿಯೋ ವೈರಲ್ ಆಗಿದ್ದು, 15,000 ವೀಕ್ಷಣೆಗಳನ್ನು ಕಂಡಿದೆ.
“ರಬ್ಬರ್ ಬ್ಯಾಂಡ್‌ಗಳಿಗಿಂತ ಆ ಹಾವಿಗೆ ತನ್ನ ಕೆಲಸ ಚೆನ್ನಾಗಿ ಅರ್ಥವಾಗುತ್ತದೆ,” ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದರೆ ಮತ್ತೊಬ್ಬ, “ಹಾವು ಅಲುಗಾಡುವವರೆಗೂ ಯಾರಿಗೂ ಸಹ ಅದೇನೆಂದು ಗೊತ್ತೇ ಆಗುವುದಿಲ್ಲ,” ಎಂದಿದ್ದಾರೆ.
https://www.youtube.com/watch?v=wsP8freCILc