
ಅಶ್ವೀನ್ ಬನ್ಸಾಲ್ ಶೇರ್ ಮಾಡಿದ ಲಿಂಕ್ಡಿನ್ ಪೋಸ್ಟ್ ಒಂದರಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲಾಗಿದೆ. ತನ್ನ ಸ್ನೇಹಿತೆಯೊಬ್ಬರು ಹೀಗೆ ವಿವಿಧ ಕಂಪನಿಗಳಲ್ಲಿನ ವೇತನದ ವಿವರಗಳ ಹೋಲಿಕೆ ಮಾಡಲು ಬಳಸಿದ ವಿವರಗಳನ್ನು ತಿಳಿಸಿದ್ದಾರೆ ಬನ್ಸಾಲ್.
“ತಾನು #jeevansathi.com ತಾಣಕ್ಕೆ ಭೇಟಿ ನೀಡುವ ಮೂಲಕ ವಿವಿಧ ಕಂಪನಿಗಳು ನೀಡುವ ವೇತನಗಳ ಬಗ್ಗೆ ಅರಿತು, ಆ ನಂತರ ಆ ಕಂಪನಿಗಳಿಗೆ ಅರ್ಜಿ ಹಾಕುವ ಕುರಿತು ಮಾತನಾಡಿದ್ದಾಳೆ,” ಎಂದು ಬನ್ಸಾಲ್ ತಿಳಿಸಿದ್ದಾರೆ.
ಈ ಪೋಸ್ಟ್‌ಗೆ 33 ಸಾವಿರಕ್ಕೂ ಹೆಚ್ಚಿನ ಲೈಕ್ಸಗಳು ಸಿಕ್ಕಿದ್ದು, ಫೇಸ್ಬುಕ್‌ನಲ್ಲಿ ಶೇರ್ ಮಾಡಲಾಗಿದೆ. ಬಹಳಷ್ಟು ಮಂದಿ ಈ ಮಹಿಳೆಯ ಸ್ಮಾರ್ಟ್ ನಡೆ ಕುರಿತಂತೆ ಮೆಚ್ಚಿ ಮಾತನಾಡಿದರೆ ಅನೇಕ ಮಹಿಳೆಯರು ತಾವೂ ಸಹ ಇದೇ ಹಾದಿಯನ್ನು ಹಿಡಿಯುವುದಾಗಿ ತಿಳಿಸಿದ್ದಾರೆ.
“ಎಲ್ಲೆಲ್ಲೂ ಅನ್ವೇಷಣೆಗಳೇ ಆಗಿವೆ. ಹೀಗೂ ಆಗುತ್ತದೆಯೇ?” ಎಂದು ಲಿಂಕ್ಡಿನ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.