ಆಸ್ಟ್ರೇಲಿಯಾದ ವೇಲ್ಸ್ನಲ್ಲಿ ಯುವತಿಯೊಬ್ಬರು ಮಲಗಿದ್ದ ವೇಳೆ ವಿಷಕಾರಿ ಜೇಡದಿಂದ ಕಡಿತಕ್ಕೊಳಗಾದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ.
18 ವರ್ಷದ ಆಬಿ ಟೆನ್ನೆಟ್ಟಾ ಎಂಬಾಕೆ ರಾತ್ರಿ ಮಲಗಿದ್ದ ವೇಳೆ ತೋಳಿನಲ್ಲಿ ನೋವು ಉಂಟಾದ ಹಿನ್ನೆಲೆ ಎಚ್ಚರಗೊಂಡು ನೋಡಿದಾಗ ದೊಡ್ಡ ಜೇಡರಹುಳುವನ್ನ ಗಮನಿಸಿದ್ದಾಳೆ.
ತೀವ್ರವಾದ ನೋವುಂಟಾದ ಹಿನ್ನೆಲೆ ಎಚ್ಚರಗೊಂಡು ನೋಡಿದಾಗ ದೊಡ್ಡ ಜೇಡವೊಂದು ನನ್ನ ಹಾಸಿಗೆಯಿಂದ ಓಡಿ ಹೋಗಿದ್ದನ್ನ ನಾನು ಕಂಡೆ. ಗಾಯ ಊದುತ್ತಲೇ ಹೋಯ್ತು. ಹಾಗೂ ಅದು ಕ್ರಮೇಣವಾಗಿ ಕೆಂಪಗಾಯ್ತು. ನನಗೆ ಕೈಯನ್ನ ಅಲುಗಾಡಿಸಲೂ ಆಗುತ್ತಿರಲಿಲ್ಲ. ನನಗೆ ಹೃದಯವೇ ನಿಲ್ಲುತ್ತಿದೆ ಎಂದೆನಿಸಿತು ಎಂದು ಆಬಿ ಹೇಳಿದ್ದಾಳೆ.
ಜೇಡ ಕಚ್ಚಿ ಮೂರು ದಿನದ ಬಳಿಕ ನನಗೆ ಬಿಸಿ ಹಾಗೂ ಹೃದಯದ ಬಡಿತ ಹೆಚ್ಚಾಗುತ್ತಾ ಹೋಯಿತು. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಿ ಸರ್ಜರಿಗೆ ಒಳಗಾಗಬೇಕಾಯ್ತು ಎಂದು ಯುವತಿ ಹೇಳಿದ್ದಾಳೆ.