ಒಲಂಪಿಕ್ಸ್ಗೆ ಜಪಾನ್ ಭರ್ಜರಿ ಸಿದ್ಧತೆ ನಡೆಸುತ್ತಿದೆ, ಇದೇ ವೇಳೆ ಸ್ಥಳೀಯ ಕೆಲವು ಜನರು ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕ್ರೀಡಾಕೂಟ ನಡೆಸದಂತೆ ಆಕ್ಷೇಪಿಸಿದ್ದಾರೆ. ಮತ್ತೆ ಕೆಲವರು ಪ್ರತಿಭಟಿಸುತ್ತಿದ್ದಾರೆ.
ಇತ್ತೀಚೆಗೆ ಒಲಂಪಿಕ್ ಕ್ರೀಡಾ ಜ್ಯೋತಿ ಹಿಡಿದು ಕ್ರೀಡಾಪಟು ಓಡುತ್ತಿದ್ದಾಗಲೇ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ಮಹಿಳೆಯೊಬ್ಬರು ವಾಟರ್ ಗನ್ ಮೂಲಕ ಕ್ರೀಡಾ ಜ್ಯೋತಿಯನ್ನು ಆರಿಸಲು ಪ್ರಯತ್ನಿಸಿದ್ದಾರೆ. ಆಕೆ ಹಾರಿಸಿದ ನೀರು ಜ್ವಾಲೆಗೆ ತಾಗಿಲ್ಲ ಎಂದು ತಿಳಿದುಬಂದಿದೆ ಹಾಗೆಯೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆಕೆಯ ಪ್ರಯತ್ನವನ್ನು ವಿಫಲಗೊಳಿಸಿದರು.
ಕುರಿ ಮಾರಿ ಕುಡಿದು ಮನೆಗೆ ಬಂದು ಜಗಳವಾಡಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ
ಉದ್ದೇಶಪೂರ್ವಕವಾಗಿ ಓಟಗಾರನನ್ನು ಗುರಿಯಾಗಿಸಿಕೊಂಡು ರಿಲೇಗೆ ಅಡ್ಡಿ ಮಾಡಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಮಿಟೊ ನಗರದ ಉಪ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ನೀರು ಹಾರಿಸಿದ 53 ವರ್ಷದ ತಕಹಾಶಿ ಆರೋಪ ಒಪ್ಪಿಕೊಂಡಿದ್ದಾಳೆ ಮತ್ತು ಜಪಾನ್ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರತಿಭಟಿಸುವುದೇ ತನ್ನ ಉದ್ದೇಶ ಎಂದು ಆಕೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
https://www.youtube.com/watch?v=zo1lWysqlrg&t=1s