ವೇಲ್ಸ್‌ನ ಮಹಿಳೆಯೊಬ್ಬರು ತಮ್ಮ ಪುಟ್ಟ ರೀಟೇಲ್ ಸ್ಟೋರ್ ಅನ್ನು 5,00,000 ಪೌಂಡ್ ಮೌಲ್ಯದ (5.16 ಕೋಟಿ ರೂಪಾಯಿ) ದೊಡ್ಡ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಹಳೆಯ ಕಟ್ಟಡಗಳ ಮೇಲೆ ಬಲು ಪ್ರೀತಿ ಇರುವ ಎಲಿಜ಼ಬೆತ್ ವಿಲಿಯಮ್ಸ್, ನಿಷ್ಕ್ರಿಯವಾಗಿದ್ದ ’ಸ್ಪಾರ್’ ಸ್ಟೋರ್ ಒಂದನ್ನು ಖರೀದಿಸಿ ಆರಂಭದಿಂದ ಕೆಲಸ ಶುರು ಮಾಡಿದ್ದಾರೆ. ಈ ಸ್ಟೋರ್ ಅನ್ನು ಉರುಳಿಸಿದ ವಿಲಿಯಮ್ಸ್, ಮುಂದಿನ ಏಳು ತಿಂಗಳುಗಳ ಕಾಲ ತಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ತಾಯಿ ಹತ್ಯೆ ಮಾಡಿ ಹೆಣ ಬೇಯಿಸಿ ತಿಂದ ಪಾಪಿ ಪುತ್ರ
ಮೂರು ಬೆಡ್‌ರೂಂಗಳು, ಒಂಧು ತೆರೆದ ಅಡುಗೆಮನೆ, ಲೌಂಜ್ ಹಾಗೂ ಕೈತೋಟಗಳಿಂದ ಈ ಹೊಸ ಮನೆ ಕಂಗೊಳಿಸುತ್ತಿದೆ.
ಬಾಯ್ ಫ್ರೆಂಡ್ ಹತ್ತಿರವಿಲ್ಲವೆಂದಾಗ ಹುಡುಗಿಯರು ಮಾಡೋದೇನು ಗೊತ್ತಾ….?
ವಾಣಿಜ್ಯೋದ್ದೇಶದ ಪ್ರದೇಶವನ್ನು ವಸತಿ ಮನೆಯನ್ನಾಗಿ ಪರಿವರ್ತಿಸಿಕೊಳ್ಳಲು ಅನುಮತಿ ಕೋರಿ ಸ್ಥಳೀಯ ಕೌನ್ಸಿಲ್ ಮೊರೆ ಹೋಗಿದ್ದರು ವಿಲಿಯಮ್ಸ್. ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ ಅನೇಕ ತಿಂಗಳು ಕೆಲಸ ನಡೆಯದೇ ಇದ್ದ ಕಾರಣ ಮನೆಯ ನಿರ್ಮಾಣ ಸ್ಥಗಿತಗೊಂಡಿತ್ತು.