ದಿನನಿತ್ಯದ ಬದುಕಿನಲ್ಲಿ ಬಳಸುತ್ತಿದ್ದ ಆಂಟಿಕ್ ವಸ್ತುಗಳನ್ನು ಒಳ್ಳೆಯ ಸ್ಥಿತಿಯಲ್ಲಿಟ್ಟಿದ್ದರೆ ಅವುಗಳಿಂದ ಜೀವನವನ್ನೇ ಬದಲಿಸಬಲ್ಲ ಅವಕಾಶವನ್ನು ಬಿಬಿಸಿಯ ’ಆಂಟಿಕ್ಸ್ ರೋಡ್‌ಶೋ’ ಕೊಡುತ್ತಾ ಬಂದಿದೆ.
ಮನೆಯ ಮೂಲೆಯಲ್ಲಿ ಧೂಳು ಹಿಡಿದು ಕೂರಲು ಲಾಯಕ್ಕು ಎಂದುಕೊಳ್ಳುವ ವಸ್ತುಗಳ ನಿಜವಾದ ಮೌಲ್ಯವೇನೆಂದು ತಿಳಿಸುತ್ತಾ ಬಂದಿರುವ ಈ ಶೋನ ಲೇಟೆಸ್ಟ್ ಸಂಚಿಕೆಯೊಂದರಲ್ಲಿ ಕಾಣಿಸಿಕೊಂಡ ಮಹಿಳೆಯೊಬ್ಬರಿಗೆ ತಮ್ಮ ಕುಟುಂಬ ಅನೇಕ ತಲೆಮಾರುಗಳಿಂದ ಕಾಪಾಡಿಕೊಂಡು ಬಂದ ವಸ್ತುವೊಂದಕ್ಕೆ 20,000 ಪೌಂಡ್ (20 ಲಕ್ಷ ರೂಪಾಯಿ) ಮೌಲ್ಯವಿದೆ ಎಂದು ಅರಿತು ಅಚ್ಚರಿಯಾಗಿದೆ.
ಬ್ರಿಟನ್‌ನ ಮಾಡರ್ನ್ ಹಿಲ್ ಪಾರ್ಕ್‌ಗೆ ಆಗಮಿಸಿದ್ದ ಜಾನ್ ಬೆಂಜ಼ಮಿನ್ ಎಂಬ ತಜ್ಞರೊಬ್ಬರಿಗೆ ಮಹಿಳೆಯ ಕುಟುಂಬದ ಬಳಿ ಇದ್ದ ಶುದ್ಧ ಆಕ್ವಾಮೆರೈನ್ ವಜ್ರದ ಬ್ರೂಜ್‌ಗಳೆಂಬ ವಸ್ತುಗಳ ಬೆಲೆ ಏನೆಂದು ಅಂದಾಜು ಸಿಕ್ಕಿದೆ. ಈ ವಸ್ತು ತನ್ನ ಅಜ್ಜನ ಕಾಲದ್ದು ಎಂದು ಮಹಿಳೆ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಯ್ತು ಜಲಪಾತ..!
63 ಕ್ಯಾರೆಟ್‌ನ ಈ ಅಪರೂಪದ ಕಲ್ಲನ್ನು ತನ್ನ ಪತಿಯ ಅಜ್ಜ ಬ್ರೆಜ಼ಿಲ್‌ನಲ್ಲಿ 1920 ಅಥವಾ 1930ರ ದಶಕದಲ್ಲಿ ಖರೀದಿಸಿದ್ದಾಗಿ ಮಹಿಳೆ ವಿವರಿಸಿದ್ದಾರೆ. ಈ ರೀತಿಯ ಅಪರೂಪದ ಕಲ್ಲುಗಳು ಸಿಗುವುದು ಬಲು ಕಷ್ಟವೆಂದ ಬೆಂಜ಼ಮಿನ್, ಅದರಲ್ಲೂ ಈ ಬಣ್ಣ ಹಾಗೂ ಗಾತ್ರದ ಅಕ್ವಾಮೆರೈನ್ ಸಿಗುವುದು ಅತ್ಯಪರೂಪ ಎಂದು ವಿವರಿಸಿ, ಅದರ ಬೆಲೆ ಏನೆಂದು ಹೇಳಿದಾಗ ಖುದ್ದು ಮಹಿಳೆಗೆ ಭಾರೀ ಅಚ್ಚರಿಯಾಗಿದೆ.