
ಪ್ರತಾಪ್ ಘಡ ಜಿಲ್ಲೆಯ ಚೋಟ್ಕಿ ಇಬ್ರಾಹಿಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ಮಹಿಳೆ ಇದೇ ಗ್ರಾಮದ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ಕುರಿತಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ಆಕೆ ತನ್ನ ವರ್ತನೆಯನ್ನು ಮುಂದುವರೆಸಿದ್ದು ವಿಷಯ ಪಂಚಾಯಿತಿ ಕಟ್ಟೆ ತಲುಪಿದೆ.
ಅಂತಿಮವಾಗಿ ಮಹಿಳೆ ಹಾಗೂ ಮತ್ತಾಕೆಯ ಪ್ರಿಯಕರನನ್ನು ಎಳೆದುಕೊಂಡು ಬರಲಾಗಿದ್ದು, ಯುವಕ ಹೇಗೋ ತಪ್ಪಿಸಿಕೊಂಡಿದ್ದಾನೆ. ಕೊನೆಗೆ ಸಿಕ್ಕಿಬಿದ್ದ ಮಹಿಳೆಯನ್ನು ಮರಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಲಾಗಿದೆ. ಅಲ್ಲದೆ ಆಕೆಗೆ ಮನಬಂದಂತೆ ಥಳಿಸಿದ್ದು, ಜೊತೆಗೆ ಆಕೆಯ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಕರೆತಂದು ತೋರಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಲೇ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗಿದ್ದು, ತಾಲಿಬಾನ್ ವರ್ತನೆಯನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ.