ಸಾಮಾನ್ಯವಾಗಿ ಮದುವೆಗಿಂತ ಮುಂಚೆ ವಧು-ವರರು ಸ್ನೇಹಿತರಿಗೆ ಪಾರ್ಟಿ ಕೊಡುವುದನ್ನು ಕೇಳಿರ್ತೀರಿ. ಆದರೆ, ಗಂಡನಿಂದ ದೂರವಾಗಿ ವಿಚ್ಛೇದನ ಪಡೆದಿದ್ದಕ್ಕೆ ಖುಷಿಯಾಗಿ ಪಾರ್ಟಿ ಕೊಡುವುದನ್ನು ಎಂದಾದ್ರೂ ಕೇಳಿದ್ದೀರಾ..?
ಹೌದು, ಇಲ್ಲೊಬ್ಬಳು ಮಹಿಳೆ ತನ್ನ ಗಂಡನ ಸಾಂಗತ್ಯ ಬೇಡವೆಂದು ವಿಚ್ಛೇದನ ಪಡೆದಿದ್ದಾಳೆ. 17 ವರ್ಷದ ತಮ್ಮ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಟ್ಟಿರುವ 45 ರ ಹರೆಯದ ಸೋನಿಯಾ ಗುಪ್ತಾ, ತನ್ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ
2003 ರಲ್ಲಿ ಭಾರತದಲ್ಲಿ ಅರೇಂಜ್ಡ್ ಮ್ಯಾರೇಜ್ ಆದ ಸೋನಿಯಾ ವಿವಾಹದ ಬಳಿಕ ಪತಿಯೊಂದಿಗೆ ಯುಕೆಗೆ ತೆರಳಿದ್ದರು. ಮದುವೆ ಬಳಿಕ ವರ್ಷಗಳ ಕಾಲ ಅತೃಪ್ತಿ ಹೊಂದಿದ್ದಾಗಿ ಹೇಳಿದ್ದಾರೆ. ವಿಚ್ಛೇದನದ ವಿಷಯ ತಿಳಿದಾಗ ಸ್ವತಃ ಈಕೆಯ ಪುತ್ರರಾದ ಮಿಖಾಲ್ ಮತ್ತು ಶೇ ಬೆಂಬಲ ವ್ಯಕ್ತಪಡಿಸಿದರಂತೆ.
“ವಿಚ್ಛೇದನದ ನಂತರ ಜೀವನವಿಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ನನ್ನ ಜೀವನವು ಈಗ ಆರಂಭವಾಗಿದೆ. ನಾನು ತುಂಬಾ ಕಲಿತಿದ್ದೇನೆ ಮತ್ತು ನಾನು ಮತ್ತಷ್ಟು ಪ್ರಬಲಳಾಗಿದ್ದೇನೆ. ನಾನು ಜೈಲಿನಿಂದ ಹೊರಬಂದಂತೆ ಮುಕ್ತಳಾಗಿದ್ದೇನೆ” ಎಂದು ಸೋನಿಯಾ ಹೇಳಿದ್ದಾರೆ.