ತಾಯಿಯೊಬ್ಬಳು ತನ್ನ ಮೂರು ವರ್ಷದ ಹೆಣ್ಣುಮಗುವನ್ನು ಮೃಗಾಲಯದ ಕರಡಿ ಬಾವಿಗೆ ತಳ್ಳಿರುವ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಉಜ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ.
ಮಗುವನ್ನು ತಳ್ಳಿದ ಮಹಿಳೆ ವಿರುದ್ಧ ಸದ್ಯ ಹತ್ಯೆಗೆ ಯತ್ನಿಸಿದ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ. ಈ ಸಂಬಂಧ ಆಕೆಯನ್ನು ತೀವ್ರ ವಿಚಾರಣೆಗೂ ಒಳಪಡಿಸಲಾಗಿದೆ.
ಚಳಿಗಾಲದಲ್ಲಿ ಏನು ಮಾಡಬೇಕು….? ಏನು ಮಾಡಬಾರದು…..?
ಪೊಲೀಸರ ತನಿಖೆ ಪ್ರಕಾರ ಮಹಿಳೆಯು 30 ವರ್ಷದ ರಷ್ಯಾ ನಿವಾಸಿ. ಆಕೆಯು ವಿಶ್ವವಿದ್ಯಾಲಯವೊಂದರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಪತಿಯು ಬಡತನದಿಂದ ಕುಟುಂಬ ಸಾಗಿಸಲಾಗದೆಯೇ ಈಕೆಯನ್ನು ತೊರೆದು ಬೇರೆ ಜೀವನ ಸಾಗಿಸುತ್ತಿದ್ದಾನೆ. ಅದರಿಂದಾಗಿ ತೀವ್ರ ಬೇಸರ ಹೊಂದಿ ಖಿನ್ನತೆಗೆ ದೂಡಲ್ಪಟ್ಟಿರುವ ಮಹಿಳೆಯು ಇರುವ ಒಬ್ಬಳೇ ಮಗಳನ್ನು ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದಾಳೆ.
ಅಂದಹಾಗೆ, ಕರಡಿ ಬಾವಿಯಲ್ಲಿ ಬಹಳ ದೊಡ್ಡದಾದ ಕರಡಿ ’’ಝೂಜು’’ ಇದ್ದಾಗಲೇ ಈ ಘಟನೆ ನಡೆದಿದೆ. ಆದರೆ, ಬಾವಿಯೊಳಗೆ ಬಿದ್ದ ಹೆಣ್ಣುಮಗುವನ್ನು ಕರಡಿಯು ಕೇವಲ ಹತ್ತಿರದಿಂದ ಮೂಸಿಕೊಂಡು ದೂರ ಸರಿದಿದೆ. ಕೂಡಲೇ ಎಚ್ಚೆತ್ತ ಮೃಗಾಲಯದ ಸಿಬ್ಬಂದಿಯು ಕರಡಿಯ ಗಮನವನ್ನು ಬೇರೆ ಕಡೆಗೆ ಸೆಳೆದು ಬಾಲಕಿಯನ್ನು ಬಾವಿಯಿಂದ ಮೇಲಕ್ಕೆ ಕರೆತಂದು ರಕ್ಷಿಸಿದ್ದಾರೆ.
ಒಂದು ವೇಳೆ ಪೊಲೀಸರ ತನಿಖೆಯಲ್ಲಿ ಮಹಿಳೆಯ ಹತ್ಯೆ ಯತ್ನ ಸಾಬೀತಾದಲ್ಲಿ 15 ವರ್ಷ ಜೈಲುಶಿಕ್ಷೆಯನ್ನು ಆಕೆ ಎದುರಿಸಬೇಕಿದೆ.