
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದ ಶೌಚಾಗೃಹ ಹಿಂಭಾಗದ ಕಿಟಕಿಯಲ್ಲಿ ಎಸೆದಿದ್ದ ಆರು ತಿಂಗಳ ಹೆಣ್ಣು ಮಗುವಿನ ಭ್ರೂಣ ಗುರುವಾರ ಪತ್ತೆಯಾಗಿದೆ.
ಮಹಿಳೆಯೊಬ್ಬರು ಹೊಟ್ಟೆ ನೋವೆಂದು ಹೇಳಿಕೊಂಡು ಬುಧವಾರ ರಾತ್ರಿ ಶಿವಮೊಗ್ಗ ನಗರದ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಬ್ಯಾಗ್ ನಲ್ಲಿ ಭ್ರೂಣ ಇಟ್ಟುಕೊಂಡು ಬಂದು ಕಿಟಕಿಯಿಂದ ಎಸೆದಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡನೊಂದಿಗೆ ಜಗಳವಾಡಿದ ಮಹಿಳೆ ಗರ್ಭಪಾತದ ಮಾತ್ರೆ ನುಂಗಿ ಅವಧಿಗೆ ಮುನ್ನ ಗರ್ಭಪಾತವಾಗಿದೆ. ಹೊಟ್ಟೆ ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿ ಭ್ರೂಣ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.