alex Certify ತನ್ನ ಕಾಲಲ್ಲಿ ಅಜ್ಜ ಅಜ್ಜಿಯ ಹೆಸರು ಹಚ್ಚೆ ಹಾಕಿಸಿಕೊಂಡ ಮಹಿಳೆ; ಅಜ್ಜಿಯರ ಭಾವನಾತ್ಮಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಕಾಲಲ್ಲಿ ಅಜ್ಜ ಅಜ್ಜಿಯ ಹೆಸರು ಹಚ್ಚೆ ಹಾಕಿಸಿಕೊಂಡ ಮಹಿಳೆ; ಅಜ್ಜಿಯರ ಭಾವನಾತ್ಮಕ ವಿಡಿಯೋ ವೈರಲ್

ತಮ್ಮ‌ ಪ್ರೀತಿಪಾತ್ರರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವ ಕ್ರೇಜ್ ಬಹಳ ಹಿಂದಿನಿಂದಲೂ ಇದೆ. ಇಲ್ಲೊಬ್ಬ ಮಹಿಳೆ ತನ್ನ ಅಜ್ಜ ಅಜ್ಜಿಯರ ಸಹಿಯನ್ನು ತನ್ನ ಕಾಲಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾಳೆ‌. ಅಷ್ಟೇ ಅಲ್ಲದೇ ಅಜ್ಜ ಅಜ್ಜಿಯರಿಗೆ ಹಚ್ಚೆ ತೋರಿಸಿ ಸರ್ಪ್ರೈಸ್ ನೀಡಿದ್ದಾಳೆ‌.

ಆ ಮೊಮ್ಮಗಳು ತನ್ನ ಹೊಸ ಟ್ಯಾಟೂವನ್ನು ಅವರಿಗೆ ಪ್ರದರ್ಶಿಸುವಾಗ ಅವರ ಪ್ರತಿಕ್ರಿಯೆಯನ್ನು ಸಹ ದಾಖಲಿಸಿದ್ದಾರೆ. ವೃದ್ಧರ ಪ್ರತಿಕ್ರಿಯೆ ಈಗ ಜಾಲತಾಣದಲ್ಲಿ ಹತ್ತಾರು ಹೃದಯಗಳನ್ನು ಕರಗಿಸಿದೆ.

ಅಜ್ಜ ಮನೆಯ ಡೈನಿಂಗ್ ಟೇಬಲ್‌ನಲ್ಲಿ ಕುಳಿತಿದ್ದು ಅವರಿಗೆ ಹಚ್ಚೆ ಓದಲು ತನ್ನ ಪಾದವನ್ನು ಎತ್ತುತ್ತಾಳೆ, ಅತ ಈ ಸ್ವೀಟ್ ಗೆಸ್ಚರ್ ಅರ್ಥೈಸಿಕೊಂಡು ಭಾವುಕರಾಗಿಬಿಡುತ್ತಾರೆ. ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ತನ್ನ ಮುಖವನ್ನು ಸಹ ಮುಚ್ಚಿಕೊಳ್ಳುತ್ತಾರೆ. ಆದರೆ ಮೊಮ್ಮಗಳು ಅವರನ್ನು ಬೆಚ್ಚಗಿನ ಅಪ್ಪುಗೆಯೊಂದಿಗೆ ಸಮಾಧಾನಪಡಿಸುತ್ತಾಳೆ.

ಮುಂದೆ ಅಡುಗೆ ಮನೆಯಲ್ಲಿದ್ದ ತನ್ನ ಅಜ್ಜಿಯನ್ನು ತೋರಿಸಿದಾಗ ಇದೇ ರೀತಿಯ ಪ್ರತಿಕ್ರಿಯೆ ಬರುತ್ತದೆ. ಅದೂ ಸಹ ಪ್ರೀತಿಯ ಅಪ್ಪುಗೆಯಲ್ಲಿ ಕೊನೆಗೊಳ್ಳುತ್ತದೆ.

ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು ತನಗೆ ಹಚ್ಚೆ ಹಾಕಿಸಿಕೊಳ್ಳುವ ಹಿಂದಿನ ದಿನ ತನ್ನ ಅಜ್ಜ , ಅಜ್ಜಿಯರಿಗೆ ತಮ್ಮ ಹೆಸರನ್ನು ಕಾಗದದ ಮೇಲೆ ಬರೆಯುವಂತೆ ಕೇಳಿಕೊಂಡಿದ್ದಾಳೆ ಎಂದು ಬಹಿರಂಗಪಡಿಸಿದ್ದಾರೆ.

ಮಹಿಳೆ ಟ್ಯಾಟೂ ಅಂಗಡಿಗೆ ಅವರ ಸಹಿಯನ್ನು ತೆಗೆದುಕೊಂಡು ನಂತರ ವೃದ್ಧ ದಂಪತಿಗೆ ಭಾರಿ ಆಶ್ಚರ್ಯವನ್ನು ನೀಡಿದರು.

ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಮೊಮ್ಮಗಳ ಸ್ವೀಟ್ ಗೆಸ್ಚರ್ ಅನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...