ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಿರುವ ಮಹಿಳೆಯರು ಎಚ್ಚರಿಂದ ಇರಬೇಕು. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ, ದರೋಡೆ ಮಾಡುವ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಯಲ್ಲಿ ಆಕ್ಟೀವ್ ಆಗಿದೆ.
ಇತ್ತೀಚೆಗೆ ಹಣ ದೋಚಲು ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ್ದ ಗ್ಯಾಂಗ್, ವೃದ್ಧೆಯನ್ನು ಕಟ್ಟಿಹಾಕಿ ಥಳಿಸಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೌರಮ್ಮ ಎಂಬುವವರು ತಮ್ಮ ಮೊಮ್ಮಕ್ಕಳನ್ನು ಟ್ಯೂಷನ್ ಗೆ ಬಿಟ್ಟು ಮನೆಗೆ ವಾಪಾಸ್ ಆಗಿದ್ದರು. ಇದನ್ನೇ ಹೊಂಚು ಹಾಕಿ ಕಾದಿದ್ದ ಗ್ಯಾಂಗ್ ಏಕಾಏಕಿ ಹಿಂಬದಿಯಿಂದ ಬಂದು ವೃದ್ಧೆಯನ್ನು ಅಟ್ಯಾಕ್ ಮಾಡಿ ಬಾಯಿಗೆ ಮಂಕಿಕ್ಯಾಪ್ ತುರುಕಿ, ಕೈಕಾಲು ಕಟ್ಟಿ ಹಾಕಿ ಥಳಿಸಿ, ಚಿನ್ನಾಭರಣ, ಹಣ ದೋಚಿ ಪರಾರಿಯಾ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.