ಚಾಮರಾಜನಗರ: ಪತಿ ಮಾಡಿದ್ದ ಸಾಲದ ಚಿಂತೆಯಿಂದ ತೀವ್ರವಾಗಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.
ಮಹದೇವಮ್ಮ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಮನೆ ನಿರ್ಮಿಸಲು ಪತಿ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಪತಿ ಮಾಡಿದ್ದ ಸಾಲದಿಂದ ಬೇಸರಗೊಂಡು ಮಹದೇವಮ್ಮ ಖಿನ್ನತೆಗೆ ಒಳಗಾಗಿದ್ದರು. ಇದೀಗ ಮನೆಯಲ್ಲಿಯೇ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಮಹದೇವಮ್ಮ ಸಾವಿಗೆ ಶರಣಾಗಿದ್ದಾರೆ.
ಬೇಗೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.