ಕೊರೊನಾ ಸಂಕಷ್ಟದಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ದಿನಗಳನ್ನ ಎಂಜಾಯ್ ಮಾಡೋಕೆ ಆಗ್ತಿಲ್ಲ. ಪದವಿ ಪ್ರದಾನ ಸಮಾರಂಭ ಕೂಡ ಆನ್ಲೈನ್ ತರಗತಿ ಮೂಲಕವೇ ನಡೀತಾ ಇರೋದ್ರಿಂದ ಆ ಸಂಭ್ರಮಕ್ಕೂ ಕೊರೊನಾ ತಣ್ಣೀರಿರೆಚಿದೆ. ಕೆನಡಾದ ರೂಬಿ ಕೋಲ್ಸ್ ಎಂಬಾ ಕೂಡ ಎಲ್ಲರಂತೆಯೇ ಪದವಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾಗೋದ್ರಿಂದ ವಂಚಿತಳಾಗಿದ್ದಳು. ಹೀಗಾಗಿ ಉಳಿದೆಲ್ಲ ವಿದ್ಯಾರ್ಥಿಗಳಂತೆ ಮನೆಯಲ್ಲೇ ಕೂತು ಈ ಕಾರ್ಯಕ್ರಮವನ್ನ ಕಣ್ತುಂಬಿಕೊಳ್ಳುವಂತಾಗಿದೆ.
ವಿಷಯ ಅಷ್ಟೇ ಆಗಿದ್ದರೆ ಅಡ್ಡಿ ಇರಲಿಲ್ಲ. ಪದವಿ ಪ್ರದಾನ ಸಮಾರಂಭಕ್ಕೂ ಮುನ್ನ ಕಾಲೇಜು ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಫೋಟೋವನ್ನ ಕಳಿಸಿಕೊಡುವಂತೆ ಹೇಳಿತ್ತು. ರೂಬಿ ಈ ಫೋಟೋದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಶೌಚಾಲಯದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ಈಕೆ ಹಾಗೆ ತನ್ನ ಮುಖ ಮಾತ್ರ ಕಾಣುವಂತೆ ಒಂದು ಸೆಲ್ಫಿ ತೆಗೆದು ಕಳುಹಿಸಿದ್ದಾಳೆ.
ಆದರೆ ಪದವಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದಾಗ ಸಹಪಾಠಿಗಳ ಫೋಟೋ ನೋಡಿ ರೂಬಿ ಕಂಗಾಲಾಗಿದ್ದಾಳೆ. ಎಲ್ಲರೂ ಶಿಸ್ತಾಗಿ ತಯಾರಾಗಿ ಫೋಟೋವನ್ನ ಕಳುಹಿಸಿದ್ದರೆ ರೂಬಿ ಫೋಟೊ ಮಾತ್ರ ವಿಚಿತ್ರವಾಗಿ ಕಂಡಿದೆ. ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.