ಇಟಲಿಯ ರಾಜಧಾನಿ ರೋಮ್ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ಇದ್ದಕ್ಕಿದ್ದಂತೆ ತನ್ನ ಬಟ್ಟೆಗಳನ್ನೆಲ್ಲ ಬಿಚ್ಚಿ, ಸಾರ್ವಜನಿಕರ ಎದುರಲ್ಲೇ ಕಾರಂಜಿಯಲ್ಲಿಳಿದು ಈಜಲು ಪ್ರಾರಂಭಿಸಿದ್ದಳು. ಈ ಘಟನೆ ಪಿಯಾ ಕೊಲೊನ್ನಾ ಫೌಂಟೇನ್ ನಲ್ಲಿ ನಡೆದಿದೆ.
ಯುವತಿ ಕೆಲಸ ನೋಡಿ ಜನರು ದಂಗಾಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಕ್ಷಣ ಹೊರಗೆ ಬರುವಂತೆ ಹೇಳಿದ್ದಾರೆ. ಆದ್ರೆ ಪೊಲೀಸರನ್ನು ನೋಡಿ ಯುವತಿ ನಕ್ಕಿದ್ದಾಳೆ. ಬಂಧಿಸುವಂತೆ ಪೊಲೀಸರು ಹಾಕಿದ ಧಮಕಿಯನ್ನೂ ಯುವತಿ ಲೆಕ್ಕಿಸಲಿಲ್ಲ. ಸ್ವಲ್ಪ ಸಮಯದ ನಂತ್ರ ಹೊರಗೆ ಬಂದ ಯುವತಿ ಬಟ್ಟೆ ತೆಗೆದುಕೊಂಡು ಹೋಗಿದ್ದಾಳೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಕೆ ಅಪರಿಚಿತ ಯುವತಿಯಾಗಿದ್ದು, ನೀರಿಗೆ ಇಳಿಯುವ ಮೊದಲು ಸೆಕೆ ಎನ್ನುತ್ತಿದ್ದಳಂತೆ. ಈ ಕಾರಂಜಿ ಸುತ್ತ ಬಿಗಿ ಭದ್ರತೆಯಿರುತ್ತದೆ. ಆದ್ರೆ ಇದ್ರ ನಡುವೆಯೂ ಯುವತಿ ನೀರಿಗೆ ಹಾರಿರುವುದು ಅಚ್ಚರಿ ತರಿಸಿದೆ.