ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೊರೊನಾ ನಿಯಂತ್ರಣಕ್ಕೆ ಕೆಲವು ಕಡೆ ಲಾಕ್ ಡೌನ್ ಜಾರಿಯಾದ್ರೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ.
ಆದ್ರೆ ಕೊರೊನಾ ಮಧ್ಯೆಯೂ ಜನರು ನಿರ್ಲಕ್ಷ್ಯದ ಕೆಲಸ ಮಾಡ್ತಿದ್ದಾರೆ. ಮಾಸ್ಕ್ ಧರಿಸದೆ ಓಡಾಡ್ತಿದ್ದಾರೆ. ಇದನ್ನು ತಡೆದ ಅಧಿಕಾರಿಗಳಿಗೆ ಧಮಕಿ ಹಾಕ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಮಾಸ್ಕ್ ಧರಿಸದ ಮಹಿಳೆಯನ್ನು ತಡೆದ ಬಿಎಂಸಿ ಉದ್ಯೋಗಿ ಮೇಲೆ ಮಹಿಳೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆ ಶುಕ್ರವಾರ ನಡೆದಿದೆ. ಮಾಸ್ಕ್ ಧರಿಸದ ಮಹಿಳೆಯನ್ನು ಬಿಎಂಸಿ ಸಿಬ್ಬಂದಿ ತಡೆದಿದ್ದಾರೆ. ಇದ್ರಿಂದ ಕೋಪಗೊಂಡ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಒದೆ ನೀಡಿದ್ದಾಳೆ. ಇಬ್ಬರ ಮಧ್ಯೆ ನಡೆದ ಗಲಾಟೆ ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಚರ್ಚೆಯ ವಿಷ್ಯವಾಗಿದೆ.
ಹಲ್ಲೆ ವೇಳೆ ಮಹಿಳೆ, ಸಿಬ್ಬಂದಿಗೆ ಕೆಟ್ಟದಾಗಿ ಬೈಯುತ್ತಿದ್ದಾಳೆ. ನನ್ನನ್ನು ಅನಾವಶ್ಯಕ ಹಿಡಿಯಲಾಗಿದೆ ಎಂದು ಕೂಗಾಡುತ್ತಿದ್ದಾಳೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಶುಕ್ರವಾರ 40 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿಗಳು ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.