ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಜಾಹೀರಾತುಗಳನ್ನು ಮಾಡಲು ಭಾರೀ ಡಿಮ್ಯಾಂಡ್ ಇರುವ ತಾಣಗಳಲ್ಲಿ ಒಂದು. ಇದೀಗ ಯುಎಇನ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯ ಹೊಸ ಜಾಹೀರಾತೊಂದಕ್ಕೆ ಈ ಕಟ್ಟಡವನ್ನು ಬಳಸಿಕೊಳ್ಳಲಾಗಿದೆ.
ಕಳೆದ ವಾರ ಬಿಡುಗಡೆಯಾದ ಈ ಜಾಹೀರಾತಿನಲ್ಲಿ, ಏರ್‌ಲೈನರ್‌ನ ಮುಖವಾದ ನಿಕೋಲ್ ಸ್ಮಿತ್-ಲಡ್ವಿಕ್ ಕಾಣಿಸಿಕೊಂಡಿದ್ದಾರೆ. ಬುರ್ಜ್ ಖಲೀಫಾದ ನೆತ್ತಿಯ ಮೇಲೆ ನಿಂತಿರುವ ನಿಕೋಲ್ ಬೆನ್ನ ಹಿಂದೆಯೇ ಎ380ಯ ಬೃಹತ್ ವಿಮಾನ ಹಾರಿ ಹೋಗಿದೆ.
ದುಬೈನಲ್ಲಿ ʼಇನ್ಫಿನಿಟಿ ಸೇತುವೆʼ ಲೋಕಾರ್ಪಣೆ, ಗಗನಚುಂಬಿ ಕಟ್ಟಡಗಳ ನಗರಿಗೆ ಮತ್ತೊಂದು ಗರಿ
ಒಂದು ನಿಮಿಷದ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡಿದವರು ನಿಬ್ಬೆರಗಾಗಿದ್ದಾರೆ. ವೃತ್ತಿಪರ ಸ್ಕೈಡೈವಿಂಗ್ ತರಬೇತುದಾರೆ ಆಗಿರುವ ನಿಕೋಲ್ ಈ ಜಾಹೀರಾತಿನಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾಣಿಸಿಕೊಂಡಿದ್ದಾರೆ.
“ಐಕಾನಿಕ್ ಎಮಿರೇಟ್ಸ್‌ನಲ್ಲಿ ಹಾರಿ ಜಗತ್ತಿನ ಅತ್ಯಂತ ಶ್ರೇಷ್ಠ ಶೋಗೆ ಹೋಗಿ,” ಎಂದು ಹೇಳುವ ಭಿತ್ತಿಪತ್ರ ಹಿಡಿದಿರುವ ನಿಕೋಲ್, ಎಮಿರೇಟ್ಸ್ ಏರ್‌ಲೈನ್ ಸಮವಸ್ತ್ರದಲ್ಲಿ ಇರುವುದನ್ನು ಕಾಣಬಹುದಾಗಿದೆ. ನೋಡ ನೋಡುತ್ತಲೇ ಎ380 ವಿಮಾನ ಈಕೆಯ ಹಿಂದೆ ಹಾರುವುದನ್ನು ಸಹ ನೋಡಬಹುದಾಗಿದೆ. ಕೊನೆಯಲ್ಲಿ ನಿಕೋಲ್ ಬಿರ್ಜ್ ಖಲೀಫಾದ ತುತ್ತ ತುದಿಯಲ್ಲಿ ನಿಂತಿರುವುದನ್ನು ನೀವು ನೋಡಬಹುದಾಗಿದೆ.