ಸಾಕು ಪ್ರಾಣಿಗಳನ್ನು ಸಾಕುವುದನ್ನು ಹಲವರು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ಬಹಳಷ್ಟು ಖರ್ಚು ಕೂಡ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬಾಕೆ ಪಾರಿವಾಳಗಳನ್ನು ಸಾಕುತ್ತಿದ್ದು, ಇದಕ್ಕಾಗಿ ಆಕೆ ಖರ್ಚು ಮಾಡುವುದು ಎಷ್ಟು ಗೊತ್ತಾ..? ನಿಜಕ್ಕೂ ಶಾಕ್ ಆಗ್ತೀರಾ..!
ಹೌದು, ಮೆಗ್ಗಿ ಜಾನ್ಸನ್ ಎಂಬಾಕೆ ಎರಡು ಪಾರಿವಾಳಗಳನ್ನು ಸಾಕುತ್ತಿದ್ದಾಳೆ. ಅದರ ಆರೈಕೆ, ನಿರ್ವಹಣೆಗಾಗಿ ಆಕೆ ಖರ್ಚು ಮಾಡುತ್ತಿರುವುದು ಬರೋಬ್ಬರಿ 4000 ಪೌಂಡ್ ಅಂದರೆ ಸುಮಾರು 4 ಲಕ್ಷ ರೂ.ಗಳು. ಈ ಪಾರಿವಾಳಗಳಿಗಾಗಿಯೇ ಪ್ರತ್ಯೇಕ ಸ್ನಾನಗೃಹ, ವಾರ್ಡೋಬ್ ಹಾಗೂ ನಡಿಗೆಗೆ ತಳ್ಳುವ ಗಾಡಿ ಕೂಡ ಇವೆ.
ʼನಿರುದ್ಯೋಗʼ ಭತ್ಯೆ ಪಡೆಯುವುದು ಹೇಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ
ಈ ಪಾರಿವಾಳಗಳು ಚಿಕ್ಕ ಮರಿಗಳಿದ್ದಾಗ ಈಕೆ ರಕ್ಷಣೆ ಮಾಡಿದಳಂತೆ. ಸ್ಕೈ ಮತ್ತು ಮೂಸ್ ಎಂದು ಈ ಪಕ್ಷಿಗಳಿಗೆ ಹೆಸರಿಡಲಾಗಿದ್ದು, ಸಾಕಷ್ಟು ಶುಶ್ರೂಷೆ ಮಾಡಿದ್ದಾಳೆ. ಹಲವು ವಾರಗಳವರೆಗೆ ಇವಕ್ಕೆ ಟ್ಯೂಬ್ ನಿಂದ ಆಹಾರ ನೀಡುತ್ತಾ, ಕಾಳಜಿ ವಹಿಸಿದ್ದಾಳೆ.
ಸ್ಕೈ ಹಾಗೂ ಮೂಸ್ ಮಲಗಲು ಪ್ರತ್ಯೇಕ ಕೋಣೆಗಳನ್ನು ಕೂಡ ಹೊಂದಿವೆ. ಅವಕ್ಕೆಂದೇ ಪ್ರತ್ಯೇಕ ಆಟಿಕೆ ಸಾಮಾನುಗಳು, ವಾರ್ಡೋಬ್ ಗಳು ಕೂಡ ಇವೆ. ಅಲ್ಲದೆ ಇವುಗಳು 17 ಜೊತೆ ಬಟ್ಟೆಯನ್ನೂ ಹೊಂದಿವೆಯಂತೆ. ಪ್ರತಿಯೊಂದು ಬಟ್ಟೆಯ ಬೆಲೆ 25 ರಿಂದ 30 ಪೌಂಡ್ ಗಳಷ್ಟಿವೆಯಂತೆ.