ತೋಟಕ್ಕೆ ಹೋದ ಯುವತಿಯೊಬ್ಬಳು ತನಗೆ ಕುಳಿತುಕೊಳ್ಳಲು ಏನು ಸಿಗಲಿಲ್ಲವೆಂದುಕೊಂಡು ಕುಂಬಳಕಾಯಿಯ ಮೇಲೆ ಕುಳಿತು ಈಗ ಸುದ್ದಿಯಾಗಿದ್ದಾಳೆ!
ಕೆಲವು ಕಡೆಗಳಲ್ಲಿ ಕುಂಬಳಕಾಯಿಯ ಹಬ್ಬ ಹ್ಯಾಲೋವೀನ್ ಆಚರಿಸಲಾಗುತ್ತದೆ. ಅದಕ್ಕೂ ಒಂದು ದಿನ ಮುಂಚಿತವಾಗಿ, ಕುಂಬಳಕಾಯಿಯ ಶಾಪಿಂಗ್ ಮಾಡಲು ಹೋದ ಯುವತಿಯೊಬ್ಬಳು ಮಾಡಿರುವ ಎಡವಟ್ಟು ಇದಾಗಿದೆ. ಕುಂಬಕಾಯಿ ಒಂದನ್ನು ಹಿಡಿದುಕೊಂಡು ಫೋಟೋಗೆ ಪೋಸ್ ಕೊಡಲು ನೋಡಿದ್ದಳು ಯುವತಿ.
ಅಲ್ಲಿ ಕುಳಿತುಕೊಳ್ಳಲು ಏನೂ ಇರಲಿಲ್ಲ. ಕುಂಬಳಕಾಯಿಯನ್ನು ನೋಡಿ ಅದು ಬಹಳ ಭಾರ ಇರಬೇಕು ಎಂದುಕೊಂಡು ತನ್ನ ತೂಕವನ್ನು ಅದು ತಡೆದುಕೊಳ್ಳುತ್ತದೆ ಎಂದುಕೊಂಡಳೋ ಏನೋ. ಅದಕ್ಕಾಗಿ ಅಲ್ಲಿಯೇ ಇದ್ದ ಕುಂಬಳಕಾಯಿ ಮೇಲೆ ಕುಳಿತೇ ಬಿಟ್ಟಳು.
ಮುಂದೆ ಏನಾಗಬಹುದು ಎಂದು ಊಹಿಸಿದ್ದ ಬುದ್ಧಿವಂತನೊಬ್ಬ ಇದರ ವಿಡಿಯೋ ಮಾಡುತ್ತಿದ್ದ. ಕುಂಬಳಕಾಯಿ ಹಿಡಿದು, ಇನ್ನೊಂದು ಕುಂಬಳಕಾಯಿ ಮೇಲೆ ಕುಳಿತ ಕೆಲವೇ ಸೆಕೆಂಡ್ಗಳಲ್ಲಿ ಕುಳಿತಿರುವ ಕುಂಬಳಕಾಯಿ ಒಡೆದು ಹೋಗಿ ಯುವತಿಯ ಪ್ಯಾಂಟ್ ಗಲೀಜಾಗಿದ್ದೂ ಅಲ್ಲದೇ ಅವಳು ಅಲ್ಲಿಯೇ ಬಿದ್ದಳು.
ಯುವತಿ ಅರೆಕ್ಷಣ ಕಕ್ಕಾಬಿಕ್ಕಿಯಾಗಿದ್ದು, ಅದರ ವಿಡಿಯೋ ಮಾತ್ರ ಜನರನ್ನು ನಕ್ಕು ನಗಿಸುತ್ತಿದೆ. ಹೈಫೈ ಡ್ರೆಸ್ ಮಾಡಿಕೊಂಡು ಪೋಸ್ ಕೊಟ್ಟರೆ ಸಾಲದು, ತಲೆಯ ಒಳಗೂ ಏನಾದರೂ ಬುದ್ಧಿ ಇಟ್ಟುಕೊಳ್ಳಬೇಕು ಎಂದು ಹಲವರು ಯುವತಿಯನ್ನು ಟೀಕಿಸುತ್ತಿದ್ದಾರೆ.