
ಮಾಡುವ ಕೆಲಸದಲ್ಲಿ ಬೇರೆಯವರನ್ನು ಹೆದರಿಸಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ರಾತ್ರಿ ಭೂತವಾಗಿ ಓಡಾಡ್ತಿದ್ದ ಯುವತಿ ಯಡವಟ್ಟಿಗೆ ಪ್ರಾಣ ಹೋಗಿದೆ. ರಾತ್ರಿ ಬಿಳಿ ಸೀರೆಯುಟ್ಟು, ಕೆಟ್ಟದಾಗಿ ಮೇಕಪ್ ಮಾಡ್ತಿದ್ದ ಯುವತಿ ರಸ್ತೆಗೆ ಅಡ್ಡ ಬರ್ತಿದ್ದಳು.
ಘಟನೆ ಮೆಕ್ಸಿಕೋದ ನೌಕಲ್ಪಾನ್ ಡಿ ಜುವಾರೆಜ್ ನಲ್ಲಿ ನಡೆದಿದೆ. ಯುವತಿ ರಸ್ತೆಯಲ್ಲಿ ಅಡ್ಡ ಬಂದಿದ್ದಳಂತೆ. ಇದ್ರಿಂದ ಹೆದರಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಒಂದೇ ಸಮನೆ ನಾಲ್ಕೈದು ಗುಂಡು ಹಾರಿಸಿದ್ದರಿಂದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಮೃತಪಟ್ಟ ಯುವತಿಯ ವಯಸ್ಸು 20 ರಿಂದ 25 ವರ್ಷ ಎನ್ನಲಾಗಿದೆ. ಲಾ ಲೊರೊನಾ ಳಂತೆ ಈ ಯುವತಿ ರೆಡಿಯಾಗ್ತಿದ್ದಳಂತೆ. ಲಾ ಲೊರೊನಾ, ಮಗುವಿನ ನೆನಪಿನಲ್ಲಿ ಬೀದಿ ಬೀದಿಯಲ್ಲಿ ಓಡಾಡುತ್ತಿದ್ದ ದೆವ್ವ ಎಂದು ಅಲ್ಲಿನವರು ಹೇಳ್ತಾರೆ. ಅನೇಕರು ಆಕೆಯ ವಿಡಿಯೋ ಮಾಡಿದ್ದಾರೆ.
ಯುವತಿ ನೋಡಿದ್ರೆ ಭಯವಾಗ್ತಿತ್ತು ಎಂದು ಅನೇಕರು ಹೇಳಿದ್ದಾರೆ. ನನ್ನ ಮಗು ಎಂದು ಅಳ್ತಿದ್ದಳಂತೆ. ಗುಂಡು ಹಾರಿಸಿದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಕ್ಟೋಬರ್ 15 ರಂದು ಘಟನೆ ನಡೆದಿದ್ದು, ತನಿಖೆ ನಡೆಸಲಾಗ್ತಿದೆ.
ಅಕ್ಟೋಬರ್ 31 ರಂದು ಹ್ಯಾಲೋವೀನ್ ದಿನಾಚರಣೆಗೆ ಮೆಕ್ಸಿಕೋದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಆತ್ಮಗಳು ಮತ್ತು ದೆವ್ವಗಳಂತೆ ಜನರು ಸಿಂಗಾರಗೊಳ್ತಾರೆ.