ಪ್ರತಿಯೊಬ್ಬರಿಗೂ ಜೀವನದಲ್ಲಿ ತಾವೇನಾಗಿರುವರೋ ಆ ಕುರಿತು ಸಂತಸ ಇರುವಷ್ಟೇ ಅನಾನುಕೂಲದ ಭಾವವೂ ಇರುತ್ತದೆ. ಒಬ್ಬ ಅಣ್ಣನಾಗಿ, ತಮ್ಮನಾಗಿ, ಅಕ್ಕ/ತಂಗಿಯಾಗಿ, ತಂದೆ/ತಾಯಿಗಾಗಿ… ಹೀಗೆ ಯಾವುದೇ ಒಂದು ಸ್ಥಾನದಲ್ಲಿ ನಿಂತು ನೋಡಿದಾಗಲೂ ಅಷ್ಟೇ, ಅಲ್ಲಿ ಸಂತಸ, ಬೇಸರಗಳೆರಡೂ ಮೂಡಬಲ್ಲವು.
ಹಿರಿಯ ಮಗಳ ಸ್ಥಾನದಲ್ಲಿರುವ ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡು ಮಾಡಿರುವ ಟ್ವೀಟ್ ಒಂದು ಭಾರೀ ಸುದ್ದಿಯಾಗಿದೆ.
“ಒಬ್ಬ ಹಿರಿಯ ಮಗಳಾಗಿ ನಾನು ಮನೆಯಲ್ಲಿರುವ ಎಲ್ಲವುಗಳು ಹಾಗೂ ಎಲ್ಲ ಕಾಳಜಿ ಮಾಡಬೇಕು. ಮನೆಯಲ್ಲಿ ಎಲ್ಲರಿಗೂ ಊಟ ಮಾಡಿ ಬಡಿಸುವುದರಿಂದ ಹಿಡಿದು, ಅತಿಥಿಗಳಿಗೆ ಚಹಾ ಹಾಗೂ ಕುರುಕಲು ಮಾಡಿಕೊಡುವವರೆಗೂ, ಪ್ರತಿಯೊಬ್ಬರನ್ನು ಅರ್ಥ ಮಾಡಿಕೊಂಡು, ಎಲ್ಲರ ಭಾವನೆಗಳನ್ನೂ, ಪ್ರತಿಯೊಂದು ಪರಿಸ್ಥಿತಿಯನ್ನೂ ಶಾಂತ ಸ್ವಭಾವದಿಂದ ಎದುರಿಸಬೇಕು,” ಎಂದು ಬರೆದುಕೊಂಡಿದ್ದಾರೆ ಈ ಮಹಿಳೆ.
“ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಇಷ್ಟಕಷ್ಟಗಳನ್ನು ಅರಿತಿದ್ದರೂ ಸಹ ಸಹಾಯ ಮಾಡುತ್ತಿರಬೇಕು. ನನ್ನ ಒಡಹುಟ್ಟಿದವರನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯಬೇಕು, ಓದಿನಲ್ಲಿ ಮುಂದಿರುವುದಲ್ಲದೇ ಎಲ್ಲಾ ಲೆಕ್ಕಾಚಾರಗಳನ್ನು ನೋಡಿಕೊಂಡು ಕೌಟುಂಬಿಕ ಸಂಬಂಧಗಳನ್ನು ನಿಭಾಯಿಸಬೇಕು.
ನೀವು ಚಿಂತಾಕ್ರಾಂತರಾಗಿದ್ದು, ಬೇಸರದಲ್ಲಿದ್ದರೂ ಸದಾ ನಗುತ್ತಿರಬೇಕು, ನಿಮ್ಮ ಆರೋಗ್ಯವನ್ನು ಪಕ್ಕಕ್ಕಿಟ್ಟು ಇತರರ ಕಾಳಜಿ ಮಾಡಬೇಕು. ಎಲ್ಲದಕ್ಕೂ ಹೌದು ಎನ್ನಬೇಕು. ಅಪ್ಪಿತಪ್ಪಿಯೂ ನೀವು ಯಾರಿಗೂ ನೋವಾಗದಂತೆ ಇರಬೇಕು, ನಿಮ್ಮ ತಪ್ಪಲ್ಲದೇ ಇದ್ದರೂ ಕ್ಷಮೆ ಯಾಚಿಸಬೇಕು, ಎಲ್ಲದಕ್ಕೂ ನಿಮ್ಮನ್ನೇ ಬೈಯ್ದುಕೊಳ್ಳಬೇಕು,” ಎಂದು ಈಕೆ ಹೇಳಿಕೊಂಡಿದ್ದಾರೆ.
ಈಕೆಯ ಈ ಪೋಸ್ಟ್‌ಗೆ ಸಮಾನ ಮನಸ್ಕರಿಂದ ಭಾರೀ ಸ್ಪಂದನಾಶೀಲ ಕಾಮೆಂಟ್‌ಗಳು ಬಂದಿವೆ.