ದಕ್ಷಿಣ ಅಮೆರಿಕದ ಎಲ್ ಸಾಲ್ವಡಾರ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 30 ವರ್ಷದ ಮಹಿಳೆಗೆ ಕೋರ್ಟ್ ಶಿಕ್ಷೆ ನೀಡಿದೆ. ಕಾಲು ಜಾರಿ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಕಾರಣ ಮಹಿಳೆಗೆ ಕೋರ್ಟ್ ಶಿಕ್ಷೆ ನೀಡಿದೆ. ವರದಿಯ ಪ್ರಕಾರ, ಇಂದು ಮಹಿಳೆಯನ್ನು ಪೆರೋಲ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಮಹಿಳೆ ಈಗಾಗಲೇ 9 ವರ್ಷಗಳ ಜೈಲು ವಾಸ ಅನುಭವಿಸಿದ್ದಾಳೆ. ಮನೆಯಲ್ಲಿ ಬಟ್ಟೆ ಒಗೆಯುವಾಗ ಗರ್ಭಿಣಿ ಸಾರಾ ರೋಗಲ್ ಕಾಲು ಜಾರಿ ಬಿದ್ದಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಮಗು ಮೃತಪಟ್ಟಿರುವುದು ಕಂಡುಬಂದಿದೆ. ಮಹಿಳೆಗೆ ಧೈರ್ಯ ನೀಡುವ ಬದಲು ಆಸ್ಪತ್ರೆ ವೈದ್ಯರು ಪೊಲೀಸರನ್ನು ಕರೆಸಿ ಮಹಿಳೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂದು ದೂರಿದ್ದರು. ನಂತ್ರ ಮಹಿಳೆಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಆಕೆಗೆ 30 ವರ್ಷಗಳ ಜೈಲು ಶಿಕ್ಷೆ ನೀಡಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ
ಎಲ್ ಸಾಲ್ವಡಾರ್ ನಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿಯಲ್ಲಿದೆ. ಗರ್ಭಪಾತವನ್ನು ಸಂಪೂರ್ಣ ನಿಷೇಧಿಸಲಾಗಿದೆ. 9 ವರ್ಷಗಳ ನಂತ್ರ ಮಹಿಳೆಗೆ ಸಿಕ್ಕ ಪೆರೋಲ್ ಗೆ ವಕೀಲರು ಖುಷಿ ವ್ಯಕ್ತಪಡಿಸಿದ್ದಾರೆ. ಇದೊಂದು ಐತಿಹಾಸಿಕ ತೀರ್ಪು. ಗರ್ಭಪಾತವಾದ ಮಹಿಳೆಯನ್ನು ಜೈಲಿನಲ್ಲಿಡುವುದು ದೌರ್ಜನ್ಯವೆಂದಿದ್ದಾರೆ.