ಚೀನಾದಲ್ಲಿ ಚಾಲಾಕಿ ವಧುವೊಬ್ಬಳ ಬಣ್ಣ ಬಯಲಾಗಿದೆ. ಮದುವೆ ಹೆಸರಿನಲ್ಲಿ ಮೋಸ ಮಾಡಿದ್ದ ಮಹಿಳೆ ಒಂದಲ್ಲ ಎರಡಲ್ಲ ಬರೋಬ್ಬರಿ 19 ಪುರುಷರಿಗೆ ಮೋಸ ಮಾಡಿದ್ದಾಳೆ. ಅವರಿಂದ ಒಟ್ಟು 2.28 ಕೋಟಿ ರೂಪಾಯಿ ವಸೂಲಿ ಮಾಡಿದ್ದಾಳೆ.
ಪೀಡಿತನೊಬ್ಬ ವಿಡಿಯೋ ನೋಡ್ತಿದ್ದ ವೇಳೆ ಇಂಟರ್ನೆಟ್ ನಲ್ಲಿ ಪತ್ನಿ ಇನ್ನೊಬ್ಬನ ಜೊತೆ ಮದುವೆಯಾಗ್ತಿದ್ದ ವಿಡಿಯೋ ಕಾಣಿಸಿದೆ. ನಂತ್ರ ಇನ್ನೊಬ್ಬ ವ್ಯಕ್ತಿ ಪತ್ತೆ ಮಾಡಿದಾಗ ಸತ್ಯ ಹೊರಬಂದಿದೆ. ದಲ್ಲಾಳಿ ಮೂಲಕ ಹಳ್ಳಿ ಹುಡುಗರಿಗೆ ಗಾಳ ಬೀಸಲಾಗ್ತಿತ್ತು. ಮದುವೆಯಾಗಿ 10 ದಿನ ಮನೆಯಲ್ಲಿರ್ತಿದ್ದ ಹುಡುಗಿ ನಂತ್ರ ಸುಳ್ಳು ಹೇಳಿ ಮನೆಯಿಂದ ಹೊರಗೆ ಹೋಗ್ತಿದ್ದಳು. ಹೀಗೆ 19 ಮಂದಿಗೆ ಮೋಸ ಮಾಡಿದ್ದಾಳೆ. ಪ್ರತಿಯೊಬ್ಬರಿಂದಲೂ ಹಣ ಪಡೆದಿರುವ ಮಹಿಳೆ ಈವರೆಗೆ 2.25 ಕೋಟಿ ಲೂಟಿ ಮಾಡಿದ್ದಾಳೆ.
ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ. ಮಹಿಳೆ ಜೊತೆಗಿದ್ದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಚೀನಾದಲ್ಲಿ ಇದು ದೊಡ್ಡ ವಿಷ್ಯವಾಗಿದೆ. ಚೀನಾದಲ್ಲಿ ಮದುವೆಯಾಗದ ಹುಡುಗರ ಸಂಖ್ಯೆ ಸಾಕಷ್ಟಿದೆ. ಅಲ್ಲಿ ಹುಡುಗಿಯರ ಸಂಖ್ಯೆ ಕಡಿಮೆಯಿದೆ.