ತನ್ನ ಪತಿ ಮನೆಯಲ್ಲಿಯೇ ಇರುವ ತಂದೆಯಾಗಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡಲು ಸಿದ್ಧ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಸದ್ಯ ಡಿಲೀಟ್ ಆಗಿರುವ ರೆಡ್ಡಿಟ್ ಪೋಸ್ಟ್ ನಲ್ಲಿ ಅನಾಮಧೇಯ ಮಹಿಳೆ ತಾನು ಸಂಪೂರ್ಣವಾಗಿ ತನ್ನ ಮೇಲೆ ಅವಲಂಬಿತವಾಗಿರುವ ಸಣ್ಣ ವ್ಯಾಪಾರವನ್ನು ಹೊಂದಿದ್ದೇನೆ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಪತಿ, ಪತ್ನಿ ಇಬ್ಬರೂ ಮನೆಯಲ್ಲೇ ಇದ್ದುಕೊಂಡು ಪೋಷಕರಾಗಬೇಕೆಂದು ನಿರ್ಧರಿಸಿದ್ದರು.
ತದನಂತರ ಪತಿ ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಅರಿತುಕೊಂಡ ನಂತರ ಅವರ ಸಂಕಲ್ಪವು ಹಿನ್ನಡೆ ಕಂಡಿತು. ನಾನೇ ಉದ್ಯಮ ನಡೆಸುವ ಮಹಿಳೆ ತನ್ನ ಕೆಲಸಕ್ಕೆ ಪ್ರತಿ ವಾರ 40-50 ಗಂಟೆಗಳ ನಿರಂತರ ಗಮನ ನೀಡಬೇಕು. ಹೀಗಾಗಿ ತಾನು ಮಗುವನ್ನ ನೋಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಪತಿ ಹೊರಗಡೆ ಕೆಲಸ ಮಾಡುತ್ತಿದ್ದು, ಮಹಿಳೆ ಪ್ರತಿ ತಿಂಗಳಿಗೆ ಗಳಿಸುವ ಹಣದಲ್ಲಿ 3-10% ಮಾತ್ರ ಪತಿ ಗಳಿಸುತ್ತಾರೆ. ಹೀಗಾಗಿ ಆತ ಹೊರಗಡೆ ಕೆಲಸಕ್ಕೆ ಹೋಗುವುದು ಬೇಡ. ಪೂರ್ಣ ಪ್ರಮಾಣದಲ್ಲಿ ಮನೆಯಲ್ಲೇ ಇರಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡುವುದಾಗಿ ಮಹಿಳೆ ಹೇಳಿದ್ದು, ಷರತ್ತನ್ನು ಹಾಕುವುದರಲ್ಲಿ ತಪ್ಪೇನಿದೆ ಎಂದು ಮಹಿಳೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕೇಳಿದ್ದಾರೆ.
ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ ಎಂದು ವರದಿಯಾಗಿದೆ. ಅನೇಕರು ಮಹಿಳೆಯ ಸಂದಿಗ್ಧತೆಯನ್ನು ಅರ್ಥಮಾಡಿಕೊಂಡಿದ್ದರೂ, ಅನೇಕರು ಮಹಿಳೆ ಸಂಬಂಧದಲ್ಲಿ ಸರ್ವಾಧಿಕಾರಿಯಾಗಿದ್ದಾಳೆಂದು ಭಾವಿಸಿದರು.