ಪ್ರಪಂಚದಾದ್ಯಂತ ದೇವರು ಮಾತ್ರವಲ್ಲದೆ ದೆವ್ವದ ಪರಿಕಲ್ಪನೆಯೂ ಇದೆ. ಪಾಸಿಟಿವ್ ಎನರ್ಜಿ ಇರುತ್ತೆ ಎಂದಾದಲ್ಲಿ ನೆಗೆಟಿವ್ ಎನರ್ಜಿ ಕೂಡ ಇರುತ್ತವೆ ಅನ್ನೋದು ಹಲವರ ನಂಬಿಕೆಯಾಗಿದೆ. ಆದರೆ, ಇಲ್ಲೊಬ್ಬಳಿಗೆ ದೆವ್ವದ ಜೊತೆ ಪ್ರೇಮಾಂಕುರವಾಗಿದ್ಯಂತೆ. ಇದನ್ನು ಸಾರ್ವಜನಿಕರ ಮುಂದೆ ಹೇಳಿದ ಬಳಿಕ ಪ್ರೇಮಿ ದೆವ್ವ ಕೋಪಿಸಿಕೊಂಡಿರುವುದಾಗಿ ಮಹಿಳೆ ಹೇಳಿದ್ದಾಳೆ.
ಇಂಗ್ಲೆಂಡ್ನ ಆಕ್ಸ್ಫರ್ಡ್ಶೈರ್ನ ಗಾಯಕಿ ಮತ್ತು ಗೀತರಚನೆಕಾರ್ತಿ ಬ್ರೋಕಾರ್ಡ್, ಐಟಿವಿಯ ದಿಸ್ ಮಾರ್ನಿಂಗ್ ಶೋನಲ್ಲಿ ತನ್ನ ದೆವ್ವ ಪ್ರೇಮಿ ಎಡ್ವರ್ಡೊ ಬಗ್ಗೆ ಹೇಳಿಕೊಂಡಿದ್ದಾಳೆ. ದೆವ್ವದ ಜೊತೆ ಪ್ರೀತಿ ಮಾಡಿ ತನ್ನ ಮೈಮೇಲೂ ದೆವ್ವ ಬಂದಿರುವ ರೀತಿ ಅನಿಸುತ್ತದೆಯಂತೆ. ಇವರಿಬ್ಬರ ವಿಷಯವನ್ನು ಬಹಿರಂಗಪಡಿಸಿದ್ದಕ್ಕೆ ಪ್ರೇಮಿ ದೆವ್ವ ಕೋಪಿಸಿಕೊಂಡಿದ್ದು, ತನ್ನಿಂದ ದೂರಾಗಲು ಯತ್ನಿಸಿದ್ದಾನೆ ಎಂದು ಬೇಸರ ತೋಡಿಕೊಂಡಿದ್ದಾಳೆ.
ಒಂದು ದಿನ ಸ್ನಾನ ಮಾಡಬೇಕಾದರೆ ಶವರ್ ಬಾಗಿಲಿನ ಹಬೆಯಲ್ಲಿ ನಾನು ಹೋಗುತ್ತಿದ್ದೇನೆ ಎಂಬ ಪದಗಳು ಕಾಣಿಸಿಕೊಂಡವು ಎಂದು ಹೇಳಿದ್ದಾಳೆ. ಅಲ್ಲದೆ ಪ್ರೇಮಿ ದೆವ್ವದ ಕೋಪಕ್ಕೆ ಬ್ರೋಕಾರ್ಡ್ ನಲುಗಿ ಹೋಗಿದ್ದಾಳಂತೆ. ಕೋಪದಿಂದ ಬ್ರೋಕಾರ್ಡ್ ಳನ್ನು ನೆಲಕ್ಕೆ ತಳ್ಳಿದ್ದಾನಂತೆ ಆ ಪ್ರೇಮಿ ದೆವ್ವ. ಕ್ಯಾಂಡಲ್ ಲೈಟ್ ಮುಖಾಂತರ ಸಂವಹನಕ್ಕೆ ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ವಂತೆ. ಅಲ್ಲದೆ ಬ್ರೋಕಾರ್ಡ್ ತನ್ನ ಪ್ರೀತಿಯನ್ನು ಮರಳಿ ಗೆಲ್ಲುವುದಾಗಿ ಆಶಿಸಿದ್ದಾಳೆ.