alex Certify ಹೃತಿಕ್ ರೋಷನ್‍ರ ‘ಬ್ಯಾಂಗ್ ಬ್ಯಾಂಗ್’ಗೆ ಮಹಿಳೆಯ ಜಬರ್ದಸ್ತ್ ಡಾನ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃತಿಕ್ ರೋಷನ್‍ರ ‘ಬ್ಯಾಂಗ್ ಬ್ಯಾಂಗ್’ಗೆ ಮಹಿಳೆಯ ಜಬರ್ದಸ್ತ್ ಡಾನ್ಸ್: ವಿಡಿಯೋ ವೈರಲ್

Woman Rocks the Dance Floor With Her Zabardast Moves on Hrithik Roshan's Bang Bang | Watch

ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಜೊತೆಗೂಡಿ ನೃತ್ಯ ಮಾಡುತ್ತಿದ್ದಾಗ, ಮಹಿಳೆಯೊಬ್ಬರು ಅದ್ಭುತ ಪ್ರದರ್ಶನ ತೋರಿದ್ದಾರೆ. ಈಕೆಯ ನೃತ್ಯ ಕಂಡ ನೆರೆದಿದ್ದವರು ಮತ್ತಷ್ಟು ಹುರಿದುಂಬಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಬ್ಯಾಂಗ್ ಬ್ಯಾಂಗ್ ಹಾಡಿಗೆ ಮಹಿಳೆಯು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಕೆಂಪು ಸೀರೆಯನ್ನು ಧರಿಸಿದ ಮಹಿಳೆ, ತನ್ನ ಶಕ್ತಿಯುತ ಮತ್ತು ದೇಸಿ ನಡೆಗಳಿಂದ ಹಾಡಿಗೆ ಅದ್ಭುತವಾಗಿ ಕುಣಿದಿದ್ದಾರೆ. ಈ ವೇಳೆ ಇತರರು ಆಕೆಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಬಹುಶಃ ಮದುವೆ ಸಮಾರಂಭದ ವಿಡಿಯೋ ಇದಾಗಿರಬಹುದು ಎನ್ನಲಾಗಿದೆ.

ಈ ವಿಡಿಯೋವನ್ನು ನಿಸರ್ಗ್ ಮೀಡಿಯಾ ಪ್ರೊಡಕ್ಷನ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇದನ್ನು ಹಂಚಿಕೊಂಡಿದ್ದಾರೆ. ವಿಡಿಯೋ 65000ಕ್ಕೂ ಹೆಚ್ಚು ಲೈಕ್ ಗಳೊಂದಿಗೆ ವೈರಲ್ ಆಗಿದೆ. ನೆಟ್ಟಿಗರು ಕೂಡ ಮಹಿಳೆಯ ಅದ್ಭುತ ನೃತ್ಯ ಕೌಶಲ್ಯದಿಂದ ಸಂತೋಷಪಟ್ಟಿದ್ದಾರೆ ಮತ್ತು ಅವರ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.

ಈ ಹಾಡು ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ಅಭಿನಯದ 2014 ರ ಬ್ಯಾಂಗ್ ಬ್ಯಾಂಗ್ ಚಲನಚಿತ್ರದ್ದಾಗಿದೆ. ಬೆನ್ನಿ ದಯಾಳ್ ಮತ್ತು ನಿತಿ ಮೋಹನ್ ಅವರು ಹಾಡಿದ್ದಾರೆ.

https://youtu.be/lO3zNTgOflY

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...