alex Certify ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಈ ಮಹಿಳೆ ಅನುಭವಿಸಿದ ಕಷ್ಟ ಕೇಳಿದ್ರೆ ಶಾಕ್​ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಈ ಮಹಿಳೆ ಅನುಭವಿಸಿದ ಕಷ್ಟ ಕೇಳಿದ್ರೆ ಶಾಕ್​ ಆಗ್ತೀರಾ…!

ತೂಕ ಇಳಿಕೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ 57 ಕೆಜಿ ತೂಕ ಇಳಿಸಿದ ಬಳಿಕ ಆಕೆಯ ಹಲ್ಲು ಉದುರಿಹೋಗಿತ್ತು ಎಂಬ ವಿಚಾರವನ್ನ ಇಂಟರ್ನೆಟ್​ನಲ್ಲಿ ಬಹಿರಂಗಪಡಿಸಿದ್ದಾರೆ .
33 ವರ್ಷದ ಕ್ಯಾಥಿ ಬ್ಲೈಥ್​ ಎಂಬಾಕೆ 2011ರಲ್ಲಿ ಗ್ಯಾಸ್ಟ್ರಿಕ್​ ಬೈಪಾಸ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಈ ಶಸ್ತ್ರಚಿಕಿತ್ಸೆಯ ಬಳಿಕ ಕ್ಯಾಥಿ ತನ್ನ ತೂಕವನ್ನ ಇಳಿಸಿದ್ದಳು. ಆದರೆ ಕೇವಲ ತೂಕ ಮಾತ್ರವಲ್ಲದೇ ಈಕೆ ಇನ್ನೂ ಅನೇಕ ಸಮಸ್ಯೆಗಳನ್ನ ಎದುರಿಸಿದ್ದಾಳಂತೆ.

ಕ್ಯಾಥಿ ಶಸ್ತ್ರಚಿಕಿತ್ಸೆಯ ಬಳಿಕ ರಕ್ತಹೀನತೆ ಸಮಸ್ಯೆ ಹಾಗೂ ವಿಟಾಮಿನ್​ ಕೊರತೆಯನ್ನ ಅನುಭವಿಸಿದ್ದಳು ಇದರಿಂದ ಆಕೆಯ ಹಲ್ಲಿನ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರಿತ್ತು ಎಂದು ಹೇಳಿದ್ದಾಳೆ.

ಶಸ್ತ್ರಚಿಕಿತ್ಸೆಗೂ ಮುನ್ನ ನನ್ನ ಹಲ್ಲು ಸುಂದರವಾಗಿಯೂ ಆರೋಗ್ಯವಾಗಿಯೂ ಇತ್ತು. 24 ವರ್ಷದವರೆಗೆ ನಾನು ಹಲ್ಲು ನೋವನ್ನೂ ಕಂಡವಳಲ್ಲ. ಆದರೆ ನನ್ನ ಈ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಹಲ್ಲಿನ ಆರೋಗ್ಯ ಸಂಪೂರ್ಣವಾಗಿ ಹಾಳಾಗಿತ್ತು. ಅಲ್ಲದೇ ಅವು ಉದುರಿ ಹೋದವು. ಕಳೆದ 8 ವರ್ಷಗಳಲ್ಲಿ ನಾನು ನನ್ನ ಹಲ್ಲನ್ನ ಉಳಿಸಿಕೊಳ್ಳಲು ಸಾಕಷ್ಟು ಹಣವನ್ನ ವ್ಯರ್ಥ ಮಾಡಿದ್ದೇನೆ ಎಂದು ಹೇಳಿದ್ದಾಳೆ.

ಸಾವಿರಾರು ಡಾಲರ್​ ಹಣ ಖರ್ಚು ಮಾಡಿ ಕ್ಯಾಥಿ ತನ್ನ ಹಲ್ಲುಗಳನ್ನ ಉಳಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಯಾವುದೇ ಪ್ರಯತ್ನವೂ ಪ್ರಯೋಜನಕ್ಕೆ ಬಾರಲಿಲ್ಲ. ಹೀಗಾಗಿ ಎಲ್ಲಾ ಹಲ್ಲುಗಳನ್ನ ತೆಗೆಸಿ ಇದೀಗ ಹಲ್ಲಿನ ಸೆಟ್​ ಹಾಕಿಸಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...