ಕೇಟಿ ಡೊನೆಗನ್ ಎಂಬ 37 ವರ್ಷದ ಬ್ರಿಟಿಷ್ ಮಹಿಳೆಯು ಗಂಡನೊಂದಿಗೆ ಉಳಿತಾಯದ ಸಂಕಲ್ಪ ಮಾಡಿ ಬರೋಬ್ಬರಿ 10 ಕೋಟಿ ರೂ. ಸಂಗ್ರಹಿಸಿದ್ದಾರಂತೆ! ಹೌದು, ಐಷಾರಾಮಿ, ದುಂದು ವೆಚ್ಚಗಳನ್ನು ಕಡಿತ ಮಾಡಿಯೇ ಅವರು ಈ ಬೃಹತ್ ಮೊತ್ತ ಸಂಗ್ರಹಿಸಿದ್ದಾರೆ.
2005ರ ಜನವರಿಯಲ್ಲಿ ಕೊಸ್ಟಾ ರಿಕಾದಲ್ಲಿ ಸ್ವಯಂಸೇವೆ ಯೋಜನೆಗೆ ತೆರಳಿದ್ದಾಗ ಕೇಟಿ ಮನಸ್ಸಿಗೆ ಹತ್ತಿರವಾದ ಅಲೆನ್ ಎಂಬ ವ್ಯಕ್ತಿಯನ್ನು ಆಕೆ ವರಿಸಿದಳು. ಮುಂಚಿನಿಂದಲೂ ಹಣ ಉಳಿಸುವ ಅಭ್ಯಾಸವಿದ್ದ ಕೇಟಿಗೆ, ದಿನೇದಿನೆ ಹಣ ಹೆಚ್ಚಿಗೆ ಸಂಗ್ರಹವಾಗುವುದನ್ನು ನೋಡುವುದೇ ಬಹಳ ಖುಷಿಯ ವಿಚಾರವಂತೆ. ತನ್ನ ಪಾಕೆಟ್ ಮನಿಯೇ ಇಷ್ಟೊಂದು ಆಗುತ್ತಿದೆಯಲ್ಲ ಎಂಬ ಆನಂದವೇ ಅವರಿಗೆ ಬಹಳ ನೆಚ್ಚಿನದಾಗಿತ್ತು ಎಂದು ಹೇಳಿಕೊಂಡಿದ್ದಾರೆ.
Shocking: ಲಸಿಕೆ ಉತ್ಪಾದನೆ ಗುರಿ ತಲುಪದ ಭಾರತ್ ಬಯೊಟೆಕ್, 11ರ ಪೈಕಿ ಒಬ್ಬರಿಗೆ ಮಾತ್ರ ಸಿಗಲಿದೆ ಕೊವ್ಯಾಕ್ಸಿನ್
2008ರಲ್ಲಿಪದವಿ ಮುಗಿಸಿದ ಕೇಟಿ ತನ್ನ ಅತ್ತೆಯ ಮನೆಗೆ ಗಂಡ ಅಲನ್ ಜತೆಗೆ ತೆರಳಿ ಹೊಸ ಮನೆಗೆ ಹೂಡಿಕೆಯನ್ನು ತಪ್ಪಿಸಿದಳಂತೆ. ಆ ವೇಳೆಗೆ ಆಕೆ ಸಣ್ಣ ಮಟ್ಟದ ಉದ್ಯೋಗದಲ್ಲಿದ್ದು ವಾರ್ಷಿಕ 28.64 ಲಕ್ಷ ರೂ. ಸಂಪಾದಿಸುತ್ತಿದ್ದರಂತೆ.
ಗಂಡ ಅಲೆನ್ ಅವರಿಗೆ ನಿಗದಿತ ಆದಾಯದ ಕೆಲಸವಿರಲಿಲ್ಲ. ಹಾಗಾಗಿ ಕೇಟಿ ಹೆಗಲ ಮೇಲೆ ಉಳಿತಾಯದ ಹೆಚ್ಚು ಭಾರ ಬಿದ್ದಿತ್ತು.
ಬಹಳ ಕಡಿಮೆ ಬೆಲೆಯ ಆಹಾರ ಸೇವಿಸುವುದು, ಹೊಸ ಬಟ್ಟೆ, ಬ್ಯಾಗ್, ಕಾರುಗಳು, ಚಪ್ಪಲಿಗಳ ಖರೀದಿಗೆ ಪೂರ್ಣ ವಿರಾಮ ಹಾಕಿದ್ದ ಕೇಟಿಗೆ ನಿಧಾನವಾಗಿ ತನ್ನ ಉಳಿತಾಯ ದೊಡ್ಡ ಮೊತ್ತಕ್ಕೆ ಬೆಳೆಯುತ್ತಿರುವ ಸಮಾಧಾನ ಕೇಟಿಯಲ್ಲಿ ಮೂಡಿತ್ತು. ಆಕೆಗೆ ಒಳ್ಳೆಯ ಕೆಲಸ ಸಿಕ್ಕು, 2014ರ ವೇಳೆಗೆ 58.28 ಲಕ್ಷ ರೂ. ವಾರ್ಷಿಕ ಪಡೆಯುವ ಸ್ಥಿತಿಗೆ ತಲುಪಿದ್ದಳು. ಗಂಡ-ಹೆಂಡತಿ ಇಬ್ಬರೂ ಸೇರಿ ಪ್ರತಿ ತಿಂಗಳು 3 ಲಕ್ಷ ಉಳಿತಾಯ ಮಾಡುವ ಮಟ್ಟಕ್ಕೆ ಜೀವನ ಸುಧಾರಿಸಿಕೊಂಡಿದ್ದರಂತೆ.
ಹೀಗೆ ಸಾಗುತ್ತಾ, 2019ರ ಏಪ್ರಿಲ್‌ನಲ್ಲಿ ತಮ್ಮ ನಿವೃತ್ತಿ ಜೀವನದ ಗುರಿಯ ಮೊತ್ತವನ್ನು ದಂಪತಿ ಮುಟ್ಟಿದ್ದಾರೆ. ಅಂದರೆ, 10 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. ಇಬ್ಬರೂ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಅಲೆಮಾರಿಗಳಂತೆ ಥಾಯ್ಲೆಂಡ್‌ನಿಂದ ಮೆಕ್ಸಿಕೊವರೆಗೆ ಪ್ರವಾಸ ಕೈಗೊಂಡಿದ್ದಾರೆ. ಸೈಕ್ಲಿಂಗ್, ಹೈಕಿಂಗ್ ಜತೆಗೆ ಸಿಕ್ಕ ಸಿಕ್ಕ ಮನರಂಜನಾ ಕ್ರೀಡೆಗಳಲ್ಲಿ ತಲ್ಲೀನರಾಗಿ ಬಾಕಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.