
ಕುಡಿತದ ರಾತ್ರಿಯೊಂದರ ಬಳಿಕ ತನಗೆ ಮುತ್ತು ಕೊಡೆಂದು ಕೇಳಿದಾಗ ಒಲ್ಲೆನೆಂದ ವ್ಯಕ್ತಿಯೊಬ್ಬನನ್ನು 28 ವರ್ಷ ವಯಸ್ಸಿನ ಮಹಿಳೆ ಗುಂಡಿಟ್ಟು ಕೊಂದ ಘಟನೆ ಅಮೆರಿಕದ ಇಲಿನೋಯಿಯಲ್ಲಿ ಜರುಗಿದೆ.
ಕ್ಲಾಡಿಯಾ ರೆಸೆಂಡಿಜ಼್-ಫ್ಲೋರೆಸ್ ಹೆಸರಿನ ಈಕೆ ತನ್ನಿಬ್ಬರು ಗೆಳೆಯರೊಂದಿಗೆ ನೈಟ್‌ಔಟ್‌ನಲ್ಲಿ ಭಾಗಿಯಾಗಿದ್ದಳು. ತಾನು ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್‌ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಲು ಮುಂದೆ ಬಂದಿದೆ.
ಈತನ ಬಳಿ ಇವೆ 12,000 ಕ್ಕೂ ಅಧಿಕ ವಿಎಚ್‌ಎಸ್ ಟೇಪ್
ಈ ವೇಳೆ ಜೇಮ್ಸ್ ಜೋನ್ಸ್‌ಗೆ, ತನಗೊಂದು ಮುತ್ತು ನೀಡೆಂದು ರೆಸೆಂಡಿಜ಼್ ಕೇಳಿಕೊಂಡಿದ್ದಾಳೆ. ಇದಕ್ಕೆ ಒಲ್ಲೆನೆಂದ ಜೇಮ್ಸ್ ತನ್ನ ಗರ್ಲ್‌ಫ್ರೆಂಡ್‌ಗೆ ಮುತ್ತು ಕೊಟ್ಟಿದ್ದಾನೆ. ಇದರಿಂದ ಹೊಟ್ಟೆ ಕಿಚ್ಚಿಗೆ ಬಿದ್ದ ರೆಸೆಂಡಿಜ಼್ ಆಕ್ರಮಣಶೀಲಳಾಗಿ ಮುತ್ತು ನೀಡಲು ಜೇಮ್ಸ್‌ನನ್ನು ಮತ್ತೊಮ್ಮೆ ಕೇಳಿದ್ದಾಳೆ.
ಇದಕ್ಕೆ ಜೋನ್ಸ್ ಮತ್ತೊಮ್ಮೆ ಒಲ್ಲೆನೆಂದ ಕೂಡಲೇ ಕೌಚ್ ಕುಶನ್‌ಗಳ ನಡುವೆ ಇದ್ದ ಆತನ ಪಿಸ್ತೂಲ್ ಪಡೆದುಕೊಂಡು ಆತನಿಗೇ ಗುರಿಯಿಟ್ಟು ಶೂಟ್ ಮಾಡಿದ್ದಾಳೆ.
ಕೂಡಲೇ ಜೇಮ್ಸ್ ಗರ್ಲ್‌ಫ್ರೆಂಡ್ 911 ಸಹಾಯವಾಣಿಗೆ ಕರೆ ಮಾಡುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರೆಸೆಂಡೆಜ಼್‌ಳನ್ನು ಬಂಧಿಸಿದ್ದಾರೆ.