ಬ್ರಿಟಿಷ್ ಯುವತಿಯೊಬ್ಬಳು ಮೊಸಳೆಯ ವಿರುದ್ಧ ಸೆಣಸಾಡುವ ಮೂಲಕ ತನ್ನ ಅವಳಿ ಸಹೋದರಿಯನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾಳೆ. ಮೆಕ್ಸಿಕೋದಲ್ಲಿ ಈ ಅವಳಿ ಸಹೋದರಿಯರು ಬೋಟ್ನಲ್ಲಿ ಪಯಣಿಸುತ್ತಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ.
28 ವರ್ಷದ ಅವಳಿ ಸಹೋದರಿಯರಾದ ಮೆಲಿಸ್ಸಾ ಹಾಗೂ ಜಾರ್ಜಿಯಾ ಈಜಾಡುತ್ತಿದ್ದ ವೇಳೆ ಮೆಲಿಸ್ಸಾಳ ಮೇಲೆ ದಾಳಿ ನಡೆಸಿದ ಮೊಸಳೆಯು ಆಕೆಯನ್ನ ಎಳೆದುಕೊಂಡು ಹೋಗಿದೆ.
ಜಾರ್ಜಿಯಾ ಮೆಲಿಸ್ಸಾಳನ್ನ ಕೂಗಿ ಕರೆದಿದ್ದಾಳೆ. ಆದರೆ ಮೆಲಿಸ್ಸಾಳ ಧ್ವನಿ ಕೇಳಿರಲಿಲ್ಲ. ಕೂಡಲೇ ನೆರವಿಗೆ ಧಾವಿಸಿದ ಜಾರ್ಜಿಯಾ ಮೊಸಳೆಯ ಬಾಯಿಯಲ್ಲಿದ್ದ ಸಹೋದರಿಯನ್ನ ಕಂಡಿದ್ದಾಳೆ.
ನೀವು ‘ಆಧಾರ್’ ನೀಡಿ ಕೊರೋನಾ ಲಸಿಕೆ ಪಡೆದುಕೊಂಡಿದ್ರಾ..? ನಿಮ್ಮ ಅನುಮತಿ ಇಲ್ಲದೇ ಹೆಲ್ತ್ ಐಡಿ ರೆಡಿ…?
ಜಾರ್ಜಿಯಾಳನ್ನ ಮೊಸಳೆಯಿಂದ ಕಾಪಾಡುವ ಸಲುವಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಅದಕ್ಕೆ ಹೊಡೆತವನ್ನ ನೀಡಿದ್ದಾಳೆ. ಮೊಸಳೆ ಕೂಡ ಇವರ ಮೇಲೆ ಪ್ರತಿದಾಳಿ ನಡೆಸಿದೆ. ಆದರೆ ಮೊಸಳೆ ಸ್ಥಳದಿಂದ ತೆರಳುವವರೆಗೂ ಬಿಡದ ಜಾರ್ಜಿಯಾ ಅದಕ್ಕೆ ಪಂಚ್ ನೀಡಿದ್ದಾಳೆ.
ಕುಟುಂಬಸ್ಥರಿಗೆ ‘ಕೊರೊನಾ’ ಕಾಡಿದ್ರೆ ಸಿಗಲಿದೆ 15 ದಿನ ರಜೆ
ಮೊಸಳೆ ದಾಳಿಯಿಂದ ಇಬ್ಬರೂ ಸಹೋದರಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಮೆಲಿಸ್ಸಾ ಇನ್ನೂ ಕೋಮಾದಲ್ಲೇ ಇದ್ದಾಳೆ.