ಹಲ್ಲಿನ ಸಮಸ್ಯೆ ಈಗ ಸಾಮಾನ್ಯವಾಗಿದೆ. ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಲ್ಲು ನೋವಿನ ಸಮಸ್ಯೆ ಎದುರಿಸುತ್ತಾರೆ. ಅನೇಕ ಬಾರಿ ಹಲ್ಲು ಕೀಳಲು ವೈದ್ಯರು ಸಲಹೆ ನೀಡ್ತಾರೆ. ದಂತ ವೈದ್ಯರ ಕೈಗೆ ಹಲ್ಲು ನೀಡಿದ್ರೆ ಕಥೆ ಮುಗಿತು ಎಂಬ ಮಾತೂ ಆಗಾಗ ಕೇಳಿ ಬರ್ತಿರುತ್ತದೆ. ಬ್ರಿಟನ್ ನಲ್ಲಿ ದಂತ ವೈದ್ಯರಿಗೆ ನೀಡಲು ಹಣವಿಲ್ಲದ ಕಾರಣ 42 ವರ್ಷದ ಮಹಿಳೆಯೊಬ್ಬಳು ಸ್ವಂತ ಪ್ರಯೋಗಕ್ಕೆ ಮುಂದಾಗಿ, ಯಡವಟ್ಟು ಮಾಡಿಕೊಂಡಿದ್ದಾಳೆ.
ಬ್ರಿಟನ್ ನಲ್ಲಿ ವಾಸಿಸುತ್ತಿರುವ 42 ವರ್ಷದ ಮಹಿಳೆ ತನ್ನ 11 ಹಲ್ಲುಗಳನ್ನು ತಾನೇ ಕಿತ್ತುಕೊಂಡಿದ್ದಾಳೆ. ಸರ್ಕಾರಿ ಆಸ್ಪತ್ರೆಯಲ್ಲಿ ದಂತ ವೈದ್ಯರಿರಲಿಲ್ಲ. ಹಾಗಾಗಿ ಡೇನಿಯಲ್ ವಾಟ್ಸ್ ಕಳೆದ ಮೂರು ವರ್ಷಗಳಲ್ಲಿ ತನ್ನ 11 ಹಲ್ಲುಗಳನ್ನು ಕಿತ್ತಿದ್ದಾಳೆ. ಈಗ ಆಕೆ ಬಾಯಿಯಲ್ಲಿ ಕೆಲವೇ ಕೆಲವು ಹಲ್ಲಿದೆ. ಆಕೆ ನಗಲು ಮುಜುಗರ ಪಟ್ಟುಕೊಳ್ತಿದ್ದಾಳೆ.
ಬಾಕ್ಸರ್ ಮೈಕ್ ಟೈಸನ್ ಗೆ ಧ್ವನಿಯಾಗುತ್ತಿದ್ದಾರೆ ’ಬಾಲಯ್ಯ’
ಬಲವಂತವಾಗಿ ಹಲ್ಲುಗಳನ್ನು ಕಿತ್ತಿದ್ದರಿಂದ, ಹಲ್ಲುಗಳು ಚಿತ್ರವಿಚಿತ್ರವಾಗಿ ಕಾಣ್ತಿವೆ. ಇದ್ರಿಂದ ಆತ್ಮವಿಶ್ವಾಸ ಕಳೆದುಕೊಂಡಿದ್ದೇನೆಂದು ಮಹಿಳೆ ಹೇಳಿದ್ದಾಳೆ. ಪ್ರತಿದಿನ ಮಹಿಳೆ ನೋವಿನ ಮಾತ್ರೆ ತೆಗೆದುಕೊಳ್ತಿದ್ದಾಳೆ.
ಸರ್ಕಾರಿ ವೈದ್ಯರಿಲ್ಲ. ಖಾಸಗಿ ವೈದ್ಯರು ದುಬಾರಿ. ನನ್ನ ಬಳಿ ಅವರಿಗೆ ನೀಡಲು ಹಣವಿಲ್ಲ. ಹಾಗಾಗಿ ನಾನು, ಬಲವಂತವಾಗಿ ಹಲ್ಲುಗಳನ್ನು ಕಿತ್ತುಕೊಂಡಿದ್ದೇನೆ. ತುಂಬಾ ನೋವಾಗ್ತಿತ್ತು. ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದಿದ್ದಾಳೆ.