ಶಾರುಖ್ ಜೊತೆಗಿನ ಹಳೆ ಭೇಟಿ ಮೆಲುಕು ಹಾಕಿದ ಯುವತಿ 30-01-2023 3:44PM IST / No Comments / Posted In: Latest News, Live News, Entertainment ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರ ಬಿಡುಗಡೆಯಾದಾಗಿನಿಂದ ಅನೇಕ ಅಭಿಮಾನಿಗಳು ಅವರ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಅವರ ಬುದ್ಧಿವಂತಿಕೆ ಮತ್ತು ಮೋಡಿ ಪ್ರಪಂಚದಾದ್ಯಂತ ಅನೇಕರಿಂದ ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ, ಟ್ವಿಟರ್ ಬಳಕೆದಾರರು ಬಾಲ್ಯದಲ್ಲಿ ಶಾರುಖ್ ಖಾನ್ ಅವರನ್ನು ಭೇಟಿಯಾದ ಕಥೆಯನ್ನು ಹಂಚಿಕೊಂಡಿದ್ದಾರೆ. “ಪಠಾಣ್ ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಅವರನ್ನು ಬಾಲ್ಯದಲ್ಲಿ ಭೇಟಿಯಾದ ದಿನವನ್ನು ಶೇರ್ ಮಾಡಿಕೊಳ್ಳುತ್ತಿದ್ದೇನೆ. ಅವರು ದಯೆ ಮತ್ತು ಸೌಮ್ಯದ ವ್ಯಕ್ತಿ” ಎಂದು ಯುವತಿ ಬರೆದುಕೊಂಡಿದ್ದಾರೆ. ರುದ್ರಾಣಿ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ನವೆಂಬರ್ 2, 2021 ರಂದು ನಟನ ಜನ್ಮದಿನದಂದು ಮೂಲ ಪೋಸ್ಟ್ ಶೇರ್ ಮಾಡಲಾಗಿತ್ತು. ಅದನ್ನು ಪುನಃ ಈಗ ನೆನಪಿಸಿಕೊಂಡಿದ್ದಾರೆ. 2001 ರಲ್ಲಿ ‘ಅಶೋಕ’ ಚಿತ್ರೀಕರಣದ ಸಮಯದಲ್ಲಿ ನಾನು ಶಾರುಖ್ ಅವರನ್ನು ಭೇಟಿಯಾಗಿದ್ದೆ. ನಾನು 6 ನೇ ತರಗತಿಯಲ್ಲಿದ್ದೆ, ದಿ ಟೆಲಿಗ್ರಾಫ್ ಇನ್ ಸ್ಕೂಲ್ಸ್ ಎಂಬ ಶಾಲಾ ಪತ್ರಿಕೆಗೆ ಸ್ವಯಂಸೇವಕಳಾಗಿದ್ದೆ. ಶಾರುಖ್ ಕೋಲ್ಕತಾದಲ್ಲಿ ‘ಅಶೋಕ’ ಗಾಗಿ ಇದ್ದರು. ನಾನು ಮತ್ತು ಒಬ್ಬ ಸಹ ಪತ್ರಕರ್ತ ಅವರನ್ನು ಸಂದರ್ಶಿಸಲು ಬಯಸಿದ್ದೆವು ಎಂದು ಯುವತಿ ಶೇರ್ ಮಾಡಿಕೊಂಡಿದ್ದಾರೆ. ಸೂಪರ್ ಸ್ಟಾರ್ ಅವರನ್ನು ಭೇಟಿಯಾಗಲು ಜನ ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಅವರ ನಡುವೆ ನಾವಿಬ್ಬರು ಮಕ್ಕಳು ನಿಂತಿರುವುದನ್ನು ನೋಡಿ ಹಲವರು ವ್ಯಂಗ್ಯವಾಗಿ ನಗುತ್ತಿದ್ದರು. ಆದರೆ ಶಾರುಖ್ ಅವರು ನಮ್ಮನ್ನು ಭೇಟಿಯಾದರು. ಕೇವಲ 15 ನಿಮಿಷಗಳ ಸಂದರ್ಶನ ಎಂದರು. ಆದರೆ ನಮ್ಮ ಬಳಿ ತಮ್ಮ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು, ಅವರು ನಮ್ಮನ್ನು ಗೆಳೆಯರಂತೆ ನೋಡಿಕೊಂಡರು ಎಂದು ಯುವತಿ ಮೆಲುಕು ಹಾಕಿದ್ದಾರೆ. ಸಂದರ್ಶನದ ಉದ್ದಕ್ಕೂ ಎಸ್‌ಆರ್‌ಕೆ ವಿನಮ್ರ, ಮೃದುವಾದ ಮತ್ತು ತಮಾಷೆಯ ವ್ಯಕ್ತಿಯಾಗಿದ್ದರು. ಅವರು ನಮ್ಮೊಂದಿಗೆ 45 ನಿಮಿಷಗಳ ಕಾಲ ಮಾತನಾಡಿದರು. ಅವರ ತಂಡವು ಸಿಟ್ಟಾಯಿತು ಎಂದು ಸ್ಮರಿಸಿಕೊಂಡಿದ್ದಾರೆ. Here is my SRK story.Thought about this a long time before posting but if not now then never.2001,I was in 6th grade,volunteering for a school newspaper called The Telegraph in Schools.SRK was in Kolkata for 'Asoka' .Me and a fellow journalist wanted to interview him! 1/n pic.twitter.com/3mShxgOtrQ — rudrani (@rudrani_dg) November 2, 2021