
ಪ್ರಸಿದ್ಧ ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ಪ್ರೇಮನಿವೇದನೆ ಮಾಡಿಕೊಂಡಿರೋ ವಿಡಿಯೋ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯುವಕ ಪ್ರಾರ್ಥಿಸುತ್ತಿರುವ ವೇಳೆ ಯುವತಿ ಮೊಣಕಾಲಿನ ಮೇಲೆ ಕುಳಿತು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಾಳೆ. ಈ ವಿಡಿಯೋಗೆ ಕೆಲವರು ದೇವಸ್ಥಾನದಲ್ಲಿ ಮೊಬೈಲ್ ನಿಷೇಧಿಸಬೇಕು ಎಂಬುದಕ್ಕೆ ಇಂತಹ ಘಟನೆಗಳೇ ಕಾರಣ ಎಂದಿದ್ದಾರೆ. ಮತ್ತೆ ಕೆಲವರು ಇದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ. ನಮ್ಮದೇಶದ ಅದೆಷ್ಟೋ ದೇಗುಲಗಳಲ್ಲಿ ಮದುವೆ ನಡೆಯುತ್ತದೆ. ದೇವಸ್ಥಾನದಲ್ಲಿ ಪ್ರೇಮ ನಿವೇದನೆ ಮಾಡುವುದು ತಪ್ಪಲ್ಲ ಎಂದಿದ್ದಾರೆ.
ಇಂತಹ ಘಟನೆಗಳಿಂದ ಕೇದಾರನಾಥ ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಮತ್ತಷ್ಟು ಮಂದಿ ಹೇಳಿದ್ದಾರೆ.