ಧಾರವಾಡ: ಭಿಕ್ಷುಕ ನೀಡಿದ ಪ್ರಸಾದ ಸೇವಿಸಿದ ಮಹಿಳೆಯ ಮಾತೇ ನಿಂತು ಹೋಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಪ್ಪು ಅಂಗಿ, ಬಣ್ಣದ ಪಂಚೆ ತೊಟ್ಟಿದ 55 ವರ್ಷದ ವ್ಯಕ್ತಿ ಗುಡೇನಕಟ್ಟಿ ಗ್ರಾಮದ ಮೀನಾಕ್ಷಿ ಮಹಾದೇವಪ್ಪ ಕಟಗಿ ಅವರ ಮನೆ ಬಳಿ ಬಂದು ಭಿಕ್ಷೆ ಬೇಡಿದ್ದು, ಮಹಿಳೆ ಐದು ರೂಪಾಯಿ ಕೊಟ್ಟಿದ್ದಾರೆ. ಆತ ಭಸ್ಮದಂತಿದ್ದ ಬಿಳಿ ಪುಡಿ ನೀಡಿ ಹಣೆಗೆ ಹಚ್ಚಿಕೊಳ್ಳಿ ಎಂದು ಹೇಳಿ ಪ್ರಸಾದ ರೂಪವಾಗಿ ಕೆಂಪು ಬಣ್ಣದ ಹಲ್ವಾ ನೀಡಿದ್ದಾನೆ.
ಆತನ ಮಾತು ನಂಬಿದ ಮಹಿಳೆ ಬಾಯಿಯಲ್ಲಿ ಪ್ರಸಾದ ಹಾಕಿಕೊಂಡು ಮನೆಯೊಳಗೆ ಹೋದ ಹತ್ತು ನಿಮಿಷದ ನಂತರ ನಾಲಿಗೆ ದಪ್ಪ ಆಗಿ ಮಾತೆ ಹೊರಡದಂತಾಗಿದೆ. ಕೈ ಸನ್ನೆ ಮೂಲಕ ಮಹಿಳೆ ನಡೆದ ಘಟನೆಯನ್ನು ಪತಿಗೆ ತಿಳಿಸಿದ್ದಾರೆ. ಊರಲ್ಲಿ ಹುಡುಕಾಡಿದರೂ ಭಿಕ್ಷುಕ ಪತ್ತೆಯಾಗಿಲ್ಲ. ವೈದ್ಯರಿಗೆ ತೋರಿಸಿದಾಗ ಕ್ರಮೇಣ ಮಾತು ಬರುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.